
ಬಳ್ಳಾರಿ : 11ರಂದು ಸೂತ್ರದ ಗೊಂಬೆ ಆಟ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 5- ಟಿ.ಎಚ್.ಎಂ.ಸಾAಸ್ಕೃತಿಕ ಕಲಾ ಟ್ರಸ್ಟ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಇದೇ ಆ.೧೧ ರಂದು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಸೂತ್ರದ ಗೊಂಬೆ ಆಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಇವರು ಕಲಾವಿದರಿಗೆ ಪ್ರಶಂದಾ ಪತ್ರಗಳನ್ನು ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್, ಬಳ್ಳಾರಿ ಕಲ್ಚರಲ್ ಆಕ್ವಿವಿಟೀಸ್ ಅಸೋಷಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಅಭಿನಯ ಕಲಾ ಕೇಂದ್ರದ ಸಾಹಿತಿ, ರಂಗ ನಿರ್ದೇಶಕ ಕೆ.ಜಗಧೀಶ್, ಬೆಂಗಳೂರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ರಾಜು ಎಮ್ಮಿಗನೂರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯುರಾದ ಶಿವನಾಯಕ್ ದೊರೆ, ಗುಡೆಕೋಟೆ ಅವರನ್ನು ಸನ್ಮಾನಿಸಲಾಗುವುದು.
ನೂಪುರ ಲಲಿತ ಕಲಾ ಟ್ರಸ್ಟ್ ಹಾಗೂ ವಿವಿಧ ಕಲಾವಿದರಿಂದ ನೃತ್ಯ ಪ್ರದರ್ಶನ , ಪ್ರಕೃತಿ ಕಲಾ ಟ್ರಸ್ಟ್ ರವರಿಂದ ಸುಗಮ ಸಂಗೀತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಡಿ ಶ್ರೀ ಮಾರುತಿ ಯಕ್ಷಗಾನ ಸೂತ್ರದ ಗೊಂಬೆ ಮತ್ತು ದೊಡ್ಡಾಟ ಮಂಡಳಿ, ಹಲುವಾಗಲು, ಹರಪನಹಳ್ಳಿ ತಾಲೂಕು, ಅವರಿಂದ ಕರ್ಣ ಪರ್ವ ಪೌರಾಣಿಕ ಕಥಾ ಪ್ರಸಂಗ ಸೂತ್ರದ ಗೊಂಬೆಯಾಟ ಇರುತ್ತದೆಯೆಂದು ಟಿ. ಹೆಚ್. ಎಂ. ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರು ಆದ ಟಿ. ಎಚ್. ಎಂ. ಬಸವರಾಜ್ ರವರು ತಿಳಿಸಿದ್ದಾರೆ.