
ಕಿನ್ನಾಳದಲ್ಲಿ ಅದ್ದೂರಿಯಾಗಿ ಜರುಗಿದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ
ಅಂತರ0ಗ ಮತ್ತು ಬಹಿರಂಗ ಶುದ್ದತೆಗೆ ಸಂಕಲ್ಪ ಮಾಡೋಣ : ನ್ಯಾ ಚಂದ್ರಶೇಖರ ಸಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ನಾವುಗಳು ಈ ದಿನದಂದು ಅಂತರAಗ ಮತ್ತು ಬಹಿರಂಗ ಶುದ್ದತೆಗೆ ಸಂಕಲ್ಪ ಮಾಡೋಣವೆಂದು ಗೌರವಾನ್ವಿತ ಜಿಲ್ಲಾ ಪ್ರಧಾನ ಹಾಗು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಕರೆ ನೀಡಿದರು.
ಅ. 2ರಂದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಾಳ ಗ್ರಾಮ ಪಂಚಾಯತಿಯಿAದ ಏರ್ಪಡಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಜೊತೆಗೆ ನಮ್ಮ ಅಕ್ಕಪಕ್ಕದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದರು. ಸ್ವಚ್ಛತೆ ಎನ್ನುವದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೇ ವಾಸ್ತವಿಕವಾಗಿರಬೇಕು. ಅಂದಾಗ ಮಾತ್ರ ಗ್ರಾಮದಲ್ಲಿ ಸ್ವಚ್ಛತೆಯ ವಾತಾವರಣ ಕಂಡು ಬರುತ್ತದೆ. ಸ್ವಚ್ಛತೆ ಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕೆAದು ಅಂದಾಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ ವಿ ಕಣವಿ ಮಾತನಾಡಿ ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳಲ್ಲಿ ಗಾಂಧೀಜಿಯವರು ಕೂಡಾ ಒಬ್ಬರಾಗಿದ್ದು ಅಂತಹ ಮಹಾತ್ಮರ ದಿನದಂದು ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತಿರುವ ನಿಜಕ್ಕೂ ಒಂದು ಮಹತ್ಕಾರ್ಯವಾಗಿದೆ ಎಂದರು. ನಾವುಗಳು ಮಾತನಾಡುವದಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕು ಅಂದಾಗ ಮಾತ್ರ ಅದಕ್ಕೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆAದರು. ಪ್ರತಿಯೊಬ್ಬ ಭಾರತೀಯ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಮುಂದೆ ಇಟ್ಟಲ್ಲಿ ದೇಶದ ಸ್ವಚ್ಛತೆಯ ಚಿತ್ರಣವೇ ಬದಲಾಗುವದರಲ್ಲಿ ಸಂದೇಹವಿಲ್ಲವೆ0ದರು.
ಇದೇ ವೇದಿಕೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವೇದಿಕೆಯಲ್ಲಿದ್ದವರಿಗೆ ಬಟ್ಟೆ ಚೀಲಗಳನ್ನು ವಿತರಿಸಿದರು. ಪ್ಲಾಸ್ಟಿಕ್ ಚೀಲ ತ್ಯಜಿಸಿ ಎನ್ನುವ ಸಂದೇಶದ ಮೂಲಕ ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ನಿಯಂತ್ರಣ ಮಂಡಳಿಯವರು ಜವಾಬ್ದಾರಿಯನ್ನು ವಹಿಸಿದರು. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಪ್ರತಿಜ್ಞಾ ವಿಧಿ ಬೋಧನೆ ಶಿಕ್ಷಕರಾದ ಮಾರುತಿ ಬೋಧಿಸಿದರು.
ಕುಮಾರ ಡಿ.ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪೋಕ್ಸೋ ನ್ಯಾಯಾಲಯ ಕೊಪ್ಪಳ, ಶ್ರೀಮತಿ ಸರಸ್ವತಿ ದೇವಿ ಪ್ರಧಾನ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯ ಕೊಪ್ಪಳ, ಮಹಾಂತೇಶ್ ಸಂಗಪ್ಪ ದರ್ಗದ್ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಮಾಲಕೇರಿ ರಾಮಪ್ಪ ಒಡೆಯರ್ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಕೊಪ್ಪಳ, ಶ್ರೀಮತಿ ಭಾಗ್ಯಲಕ್ಷ್ಮಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಕೊಪ್ಪಳ, ಆದಿತ್ಯ ಕುಮಾರ್ ಹೆಚ್.ಆರ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಕೊಪ್ಪಳ, ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರ್ಗಪ್ಪ ಡಂಬರ, ಇಒ ದುಂಡಪ್ಪ ತುರಾದಿ, ತಹಸೀಲ್ದಾರ್ ವಿಠಲ್ ಚೌಗಲಾ, ಪಿಡಿಒ ಪರಮೇಶ್ವರಯ್ಯ ತೆಲಗಡೆಮಠ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು, ಖಿPಔ, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಜರಿದ್ದರು.