ವಿದ್ಯುತ ಕಂಬಗಳ ಚಿನ್ಹೆ ತೆರವುಗೋಳಿಸುವ ಆದೇಶ ನೀಡಿ ಆದೇಶ ಹಿಂಪಡೆದ ತಹಶೀಲ್ದಾರ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 31- ನಗರದ ರಾಣಾ ಪ್ರತಾಪ ವೃತ್ತ ದಿಂದ ಜುಲೈನಗರ ವೃತ್ತದವರೆಗೆ ವಿದ್ಯುತ ಕಂಬಗಳ ಚಿನ್ಹೆಗಳ ಮೇಲೆ ದೇವರ ನಾಮ ಅಳವಡಿಸಿದ ವಿವಾದ ರಾಜ್ಯ,ರಾಷ್ಠಮಟ್ಟದಲ್ಲೂ ಪ್ರತಿಧ್ವನಿಸಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಶಾಸಕರ ಅನುದಾನದಡಿ ಕೆಆರ್‌ಐಡಿಎಲ್ ಕರ್ನಾಟಕ ಗ್ರಾಮೀಣ ಮೂಲಸೌರ್ಕಯ ಅಭಿವೃದ್ದಿ ನಿಯಮಿತಕ್ಕೆ ಫೆಬ್ರುವರಿ ತಿಂಗಳಲ್ಲಿ ನಗರದ ರಾಣಾ ಪ್ರತಾಪ ವೃತ್ತದಿಂದ ಜುಲೈ ನಗರ ವೃತ್ತದವರೆಗೆ ರಸ್ತೇ ನಿರ್ಮಾಣ, ರಸ್ತೆ ಡಿವಾಡರ್ ಹಾಗೂ ವಿದ್ಯುತ ಕಂಬಕ್ಕಾಗಿ ಎರಡು ಕಡೆಯು ಚರಂಡಿ ನಿರ್ಮಾಣ ಸೇರಿ ೪ಕೋಟಿ ೪೦ಲಕ್ಷ ಅನುದಾನ ಬಿಡುಗಡೆಯಾಗಿತ್ತು. ರಾಣಾಪ್ರತಾಪ ವೃತ್ತದಿಂದ ಜುಲೈ ನಗರದ ಇಂದಿರಾಗಾAಧಿ ವೃತ್ತದವರೆಗೆ ರಸ್ತೆ ನಿರ್ಮಾಣ ಮಾಡಿ ಎರಡು ಕಡೆ ಚರಂಡಿ ಕಾರ್ಯ ನಡೆಯಿತು.
ಆದರೆ ವಿದ್ಯುತ ಕಂಬಗಳ ಮೇಲೆ ತಿರುಪತಿ ತಿಲಕ, ಶ್ರೀರಾಮ ಚಂದ್ರನ ಬಿಲ್ಲು, ಹನುಮನ ಗದೆ ಅಳವಡಿಸಲಾಗಿದೆ.
ಸರಕಾರದ ಅನುದಾನ ಬಳಕೆ ಮಾಡಿಕೊಂಡು ನಡೆಸುತ್ತಿರುವ ಕಾಮಗಾರಿಯಲ್ಲಿ ಒಂದು ಧರ್ಮಕ್ಕೆ ಸಿಮಿತವಾಗಿರುವ ಸಂಕೇತ ಬಳಕೆ ಮಾಡಿರುವುದು ಸರಿಯಲ್ಲ ಇದು ಕೋಮು ಗಲಭೆಗೆ ಕಾರಣವಾಗುತ್ತಿದ್ದು ತೆರವುಗೋಳಿಸಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಪೌರಾಯುಕ್ತರು ಗುತ್ತಿಗೆದಾರರಿಗೆ ನೋಟಿಸ ನೀಡಿದ್ದರು.
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಗಂಗಾವತಿ ತಹಶೀಲ್ದಾರರಿಗೆ ಮೌಕಿಕ ಆದೇಶ ಹಿನ್ನಲೇ ವಿದ್ಯುತ ಕಂಬಗಳ ತೆರವಿಗೆ ತಹಶೀಲ್ದಾರ ಆದೇಶ ನೀಡಿದ್ದರು.
ಸ್ಥಳಿಯ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ನಗರಸಭೆಯ ತುರ್ತು ಸಭೆಯಲ್ಲಿ ಚರ್ಚಿಸಿ ಹನುಮನು ಉದಿಸಿದ ನಾಡು ಅಂಜನಾದ್ರಿ ಕ್ಷೇತ್ರದ ಸಲುವಾಗಿ ವಿದ್ಯುತ ಕಂಬಗಳಿಗೆ ದೇವೆರ ನಾಮ ಅಳವಡಿಸಲಾಗಿದೆ ಎನ್ನುತ್ತಿದಂತೆ ತಹಶೀಲ್ದಾರ ಯೂಟರ್ನ ಹೋಡೆದು ತೆರವು ಆದೇಶ ಹಿಂಪಡೆದ ವಿವಾದ ರಾಜ್ಯ ಹಾಗೂ ರಾಷ್ಠಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಪ್ರಗತಿಪರ ಸಂಘಟನೆಗಳು ಹಿಂದೂ ಪರ ಸಂಘಟನೆಗಳ ಮಧ್ಯೆ ವಾಕಸಮರ ಮಾತಿನ ಜಟಾಪಟಿ ನಡದಿದೆ. ಕೆಲವೋಂದು ಅಭಿವೃದ್ದಿ ವಿಷಯದಲ್ಲಿ ಧರ್ಮ ರಾಜಕಾರಣ ಸಲ್ಲದು ಎನ್ನುತ್ತಿದ್ದಾರೆ.
ಹಿಂದೂ ಪರ ಸಂಘಟನೆಗಳು ತಿರುಪತಿಯ ತಿರುಮಲದಲ್ಲಿ ವೆಂಕಟೇಶ ದೇವೆರ ನಾಮಗಳನ್ನು ಅಳವಡಿಸಿದ್ದಾರೆ. ಅದರಂತೆ ಹನುಮ ಜನಿಸಿದ ನಾಡು ಅಂಜನಾದ್ರಿ ರಾಷ್ಠ ಮಟ್ಟದಲ್ಲಿ ಬೆಳೆಯುವ ಪರಿಕಲ್ಪನೆ ಇರಬೇಕು ಎನ್ನುವ ವಾದ ನಡದಿದೆ.
ವಿದ್ಯುತ ಕಂಬಗಳಿಗೆ ದೇವರ ನಾಮ ಅಳವಡಿಸಲು ಯಾರು ಹೇಳಿದರು ಎಂಬುವದಕ್ಕೆ ಕೆಆರ್‌ಐಡಿಎಲ್ ಇಲಾಖೆ ಮೌನವಹಿಸಿದೆ.
ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ತಿರುಪತಿಯ ತಿರುಮಲದಲ್ಲಿ ವಿದ್ಯುತ ಕಂಬಗಳಿಗೆ ವೆಂಕಟೇಶ್ವರನ ತಿಲಕ ವಿರುವಂತೆ ಅಂಜನಾದ್ರಿಯ ನಾಡು ಹನುಮನ ಉದಿಸಿದ ನಾಡಿನಲ್ಲಿ ಅಭಿವೃದ್ದಿ ಮಾಡುವಾಗ ಗಂಗಾವತಿ ಪಟ್ಟಣ ಮೋದಲಿಗೆ ಬರುವ ರಾಣಾ ಪ್ರತಾಪ ವೃತ್ತದಿಂದ ಜುಲೈ ನಗರ ವೃತ್ತದವರೆಗೆ ವಿದ್ಯುತ ಕಂಬಗಳ ಮೇಲೆ ತಿರುಪತಿ ತಿಲಕ, ಶ್ರೀರಾಮ ಚಂದ್ರನ ಬಿಲ್ಲು, ಹನುಮನ ಗದೆ ಅಳವಡಿಸಿದ ವಿಚಾರ ಅಂಜನಾದ್ರಿ ಕ್ಷೇತ್ರ ಬೆಳವಣಿಗೆ ಸರ್ವರೂ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.