ತಾಲೂಕು ಕಮ್ಮವಾರಿ ಸಂಘದಿ0ದ ಕಾರ್ತಿಕ ಮಾಸ ವನಭೋಜನ ಮಹೋತ್ಸವ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 24- ನಗರದ ಬಳ್ಳಾರಿ ರಸ್ತೆಯಲ್ಲಿರುವ ತಾಲೂಕು ಕಮ್ಮವಾರಿ ಸಂಘದ ಕಲ್ಯಾಣ ಮಂಟಪದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಪವಿತ್ರ ಕಾರ್ತಿಕ ಮಾಸ ಸಂದರ್ಭವಾಗಿ ಸಾಮೂಹಿಕ ವನ ಭೋಜನ ಕಾರ್ಯಕ್ರಮ ಜರಗಿತು.

ಶಾಲಾ ಮಕ್ಕಳಿಗೆ ಹೆಚ್ಚು ಅಂಕ ಗಳಿಸಿದ ೪೦ ವಿದ್ಯಾರ್ಥಿಗಳಿಗೆ ಸಂಘದಿ0ದ ಸ್ಕಾಲರ್ಶಿಪ್ ವಿತರಿಸಲಾಯಿತು.

ಅಧ್ಯಕ್ಷ ಕೊಲ್ಲಿ ಶ್ರೀನಿವಾಸ್ ರಾವ್ ಸರ್ವರನ್ನು ಸ್ವಾಗತ ಬಯಸಿದರು.

ಈ ಕಾರ್ಯಕ್ರಮದಲ್ಲಿ ಶೋಭೆಯನ್ನು ತಂದ ಬಳ್ಳಾರಿ ಬುಡಾ ಅಧ್ಯಕ್ಷ ಜೆ.ಎಸ್.ಆಂಜೇಯಲು, ಎಂ.ವೀರಭದ್ರ ರಾವ್, ಸುಧೀರ್, ಡಾ.ಲಲೀತಾ, ಟಿ.ಶ್ರೀಕಾಂತ್, ಡಾ.ಶ್ರೀಮತಿ, ಪ್ರಶಾಂತಿ, ಸಂಘದ ಪದಾಧಿಕಾರಿಗಳು, ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಗಣ್ಯ ಮಾನ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!