
ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ತಂಬ್ರಹಳ್ಳಿ ಹಾಗೂ ಬಣ್ಣದ ಬಾವಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ನಗರದ ಸಾಹಿತ್ಯ ಭಾವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ರವಿವಾರ ಸಂಜೆ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಹಳ್ಳಿ ಮತ್ತು ಕಾರ್ಯದರ್ಶಿ, ಮೀನಾಕ್ಷಿ ಬಣ್ಣದ ಬಾವಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷರಾದ ಜಿಎಸ್ ಗೋನಾಳ್ ತಿರುಳು ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎಮ್ ಸಾಧಿಕ್ ಅಲಿ ಕಾರ್ಯಕ್ರಮ ಸಂಘಟಕ ಮಹೇಶ್ ಬಾಬು ಸುರುವೇ ವೇದಿಕೆ ಗೌರವಾಧ್ಯಕ್ಷ ಎಂಬಿ ಅಳವಂಡಿ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಸಮ್ಮೇಳನದ ಅಧ್ಯಕ್ಷ ಎಲ್ಲಪ್ಪ ಬಡಿಗೇರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು