
ಶಿಶಿಕ್ಷು ತರಬೇತಿ : 26 ರಂದು ಕ್ಯಾಂಪಸ್ ಸಂದರ್ಶನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಕುಕನೂರನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಬೇವಿನಹಳ್ಳಿ ರವರ ವತಿಯಿಂದ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು 2024ರ ಆಗಸ್ಟ್ 26 ರಂದು ಬೆಳಿಗ್ಗೆ 10 ಗಂಟೆಗೆ ಕುಕನೂರಿನ ಗುದ್ನೆಪ್ಪ ಮಠದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.
ಐಟಿಐ ಪಾಸಾದ ಹಾಗೂ ಪ್ರಸ್ತುತ ಡಿಸೆಂಬರ್ 2024ರ ಪೂರಕ ಸಿ.ಬಿ.ಟಿ. ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆ (ರಿಜಲ್ಟ್ ವೇಟಿಂಗ್) ಯಲ್ಲಿರುವ ಎಲೆಕ್ಟ್ರಿಷಿಯನ್, ಫೀಟ್ಟರ್, ವೆಲ್ಡರ್, ಟರ್ನರ್, ಡಿಜೈಲ್ ಮೇಕಾನಿಕ್, ಎಲೆಕ್ಟ್ರಿಕ್ ಮೇಕಾನಿಕ್, ವೃತ್ತಿಯ ಅಭ್ಯರ್ಥಿಗಳಿಗೂ ಶಿಶಿಕ್ಷು ತರಬೇತಿ (ಅಪ್ರೇಂಟಿಶಿಪ್ ಟ್ರೈನಿಂಗ್)ಗಾಗಿ ಕ್ಯಾಂಪಸ್ ಸಂದರ್ಶನವನ್ನು ನಡೆಯಲಿದೆ.
ಈ ಕ್ಯಾಂಪಸ್ ಸಂದರ್ಶನಕ್ಕೆ ಭಾಗವಹಿಸುವ ಆಸಕ್ತರು ತಮ್ಮ ಆಧಾರ್ ಕಾರ್ಡ, 2 ಫೋಟೊ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು ಹಾಗೂ 1 ಸೆಟ್ ಝಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಕುಕನೂರಿನ ಗುದ್ನೆಪ್ಪಮಠದ ಸರ್ಕಾರಿ ಕೈಗಾರಿಕಾ ತರಬೇತಿ ಹಾಗೂ ಮೊಬೈಲ್ ಸಂ: 9164198246, 9964247098, 8618952961, 9481718859 ಹಾಗೂ 9945789400 ಇವರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.