ಶಿಕ್ಷಕರು ದೇಶ ನಿರ್ಮಿಸುವ ಶಿಲ್ಪಿಗಳು : ಡಾ.ರವಿ ಚವ್ಹಾಣ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5*- ಶಿಕ್ಷಕರು ದೇಶ ನಿರ್ಮಿಸುವ-ಶಿಲ್ಪಿಗಳು ಎಂದು ಕಾಲೇಜಿನ ಪ್ರಾಚಾರ್ಯರು ಡಾ. ರವಿ ಎನ್ ಚವ್ಹಾಣ ಹೇಳಿದರು.
ನಗರದ ಎಚ್.ಆರ್.ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿ ಶಿಕ್ಷಕರು ಭವ್ಯ ಭಾರತದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಪವಿತ್ರವಾದ ವೃತ್ತಿಯಲ್ಲಿ ಕೆಲಸ ನಿರ್ವಹಿಸುವದೇ ಹೆಮ್ಮೆಯಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣರು ಶಿಕ್ಷಕರಾಗಿ ರಾಷ್ಠಪತಿಗಳಾಗಿ ದೇಶವನ್ನು ಮುನ್ನಡೆಸಿದ ಮಹಾನ ಚೇತನರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಕೆಎಚ್ ಕೊಳ್ಳನವರ್, ಹನುಮಂತ ವಡ್ಡರ್, ನರಸಿಂಹಲು, ಶ್ರೀಮತಿ ಸುವರ್ಣ ಲತಾ, ಕುಮಾರಿ ಶ್ವೇತಾ, ವೆಂಕಟೇಶ್ ಚವ್ಹಾಣ, ಗ್ಯಾನಪ್ಪ, ಶ್ರೀಕಾಂತ್ ಉಪಸ್ಥಿತರಿದ್ದರು.