
ಮಹಾನ್ ವ್ಯಕ್ತಿಗಳು ಹಾಕಿ ಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು : ತೆನ್ನಳ್ಳಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 22- ಪಟ್ಟಣದ ಹಳೆ ಪಟ್ಟಣ ಪಂಚಾಯತ್ ಕಾರ್ಯಾಲಯದ ಬಯಲು ರಂಗಮ0ದಿರ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿ, ರಾಮಯಣ ಮಹಾಕಾವ್ಯದ ಕೃರ್ತ ಆದಿಕವಿ ವಾಲ್ಮೀಕಿ ಮಹರ್ಷಿಗಳು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ಮಹಾನ್ ವ್ಯಕ್ತಿಗಳು ಹಾಕಿ ಕೊಟ್ಟ ತತ್ತ÷್ವದ ಮೂಲಕ ಮುನ್ನಡೆಯಬೇಕು. ಹಲವು ವ್ಯಕ್ತಿಗಳು ತಮ್ಮದೇಯಾದ ನಾಡಿಗಾಗಿ ಶ್ರಮಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಸಮಾಜದ ಭಾಂದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ತಾಲೂಕು ಕೇಂದ್ರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕ ಬಸವರಾಜ ರಾಯರಡ್ಡಿ ಅವರ ಗಮನಕ್ಕೆ ತರಲಾಗಿದೆ. ತಾಲೂಕಿನ ಮಸಾರಿ ಭಾಗದಲ್ಲಿ ವಾಲ್ಮೀಕಿ ಸಮುದಾಯ ಬಂಧುಗಳು ಹೆಚ್ಚಿನ ಸಂಖ್ಯೆ ಹೊಂದಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದರು.
ತಾಲೂಕು ಪಂಚಾಯತಿ ಕಾರ್ಯಾನಿರ್ವಾಹಕ ಅಧಿಕಾರಿ ಸಂತೋಷ್ ಬಿರದಾರ ಪಾಟೀಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಪಾಟೀಲ್, ವಾಲ್ಮೀಕಿ ಸಮಾಜದ ತಾಲೂಕ್ಷ ಅಧ್ಯಕ್ಷ ಮಾನಪ್ಪ ಪೂಜಾರ್, ಮುಖಂಡ ಟಿ.ರತ್ನಾಕರ್, ಶಿವಶಂಕರ್ ದೇಸಾಯಿ, ಶರಣಪ್ಪ ಉಪ್ಪಾರ್, ಶಂಕರ್ ಗೌಡ ಮಾಲಿಪಾಟೀಲ್, ಪಟ್ಟಣ ಪಂಚಾಯತಿ ಸದಸ್ಯ ಕಳಕಪ್ಪ ತಳವಾರ, ಅಮರೇಶ ಹುಬ್ಬಳ್ಳಿ, ರೇವಣಪ್ಪ ಹಿರೇಕುರುಬರು, ಹನುಮಂತಪ್ಪ ಭಜಂತ್ರಿ ಹಾಗೂ ಇನ್ನಿತರರು ಇದ್ದರು.