
ಅನಾಮಧೇಯ ಮಹಿಳೆ ಶವ ಪತ್ತೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಜಿಲ್ಲೆಯ ಗಂಗಾವತಿಯ ತಾಲ್ಲೂಕಿನ ವಿರುಪಾಪುರ ಗಡ್ಡಿಯ ನದಿಯ ಅಡಕಲ್ಲು ಗುಂಡಿನ ಹತ್ತಿರ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿದ್ದು, ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:೨೧/೨೦೨೪ ಕಲಂ ೧೯೪(೩)(೬) ಬಿ.ಎನ್.ಎಸ್.ಎಸ್ ೨೦೨೩ ಅಡಿ ಪ್ರಕರಣ ದಾಖಲಾಗಿದೆ.
2024ರ ಜುಲೈ 03ರಂದು ವಿರುಪಾಪುರ ಗಡ್ಡಿಯ ನದಿಯ ಅಡಕಲ್ಲು ಗುಂಡಿನ ಹತ್ತಿರ ಅನಾಮಧೇಯ ಮಹಿಳೆಯ ಶವ ಕಂಡು ಬಂದ ಹಿನ್ನೆಲೆಯಲ್ಲಿ ವಿರುಪಾಪೂರು ಗ್ರಾಮದ ಪರಶುರಾಮ ಎಂಬುವರು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
ಈ ಮಹಿಳೆಯು ಸುಮಾರು 15 ರಿಂದ 20 ದಿನಗಳ ಹಿಂದೆ ಬಿದ್ದಿರುವಂತೆ ಮಹಿಳೆಯ ದೇಹದ ಕೆಳಗಿನ ಭಾಗ ಕೈ.ಕಾಲುಗಳು ಹಾಗೂ ಇತರೆ ಕಡೆಗಳಲ್ಲಿ ಯಾವುದೋ ಪ್ರಾಣಿ ತಿಂದಂತೆ ಮತ್ತು ಶವವು ಸಂಪೂರ್ಣ ಕೊಳೆತಿದೆ.
ಮೃತ ಮಹಿಳೆಯ ಎಡಗೈ ಮೇಲೆ ಅಮ್ಮ ಅಂತಾ ಹಚ್ಚೆ ಇದ್ದು, ಈ ಮೃತ ಮಹಿಳೆಯ ಸಂಬಂಧಿಕರು ಹಾಗೂ ವಾರಸುದಾರರಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ಪಿಐ ದೂ.ಸಂ: ೦೮೫೩೩-೨೩೦೮೫೪, ಮೊ.ಸಂ: ೯೪೮೦೮೦೩೭೩೦, ಎಸ್‌ಪಿ ಕಚೇರಿ ದೂ.ಸಂ: ೦೮೫೩೯-೨೩೦೧೧೧ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.