2

ಅಂಗಡಿ ಮಾಲೀಕರಿಗೆ ಶಾಕ್ ಕೊಟ್ಟ ನಗರ ಸಭೆ : 250 ಕೆಜಿ ಗೂ ಹೆಚ್ಚಿನ ಪ್ಲಾಸ್ಟಿಕ್ ಬ್ಯಾಗ್ ವಶ

ಕರುನಾಡ ಬೆಳಗು ಸುದ್ದಿ

ವಿಜಯನಗರ, 8- ಪೌರಾಯುಕ್ತರ ನಿರ್ದೇಶನ ಮೇರೆಗೆ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರಿಗೆ ಬೆಳ್ಳಂ ಬೆಳಿಗ್ಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಬಿಗ್ ಶಾಕ್ ಕೊಟ್ಟರು.

ದಸರಾ ಹಬ್ಬದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ ಎಂದು ನಗರಸಭೆ ಪೋರಾಯುಕ್ತರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ . ಕೂಡಲೇ ಕಾರ್ಯಪ್ರವೃತ್ತರಾದ ಹೊಸಪೇಟೆ ನಗರಸಭೆ ಪರಿಸರ ಅಧಿಕಾರಿ ಆರತಿ ಮತ್ತು ಅವರ ತಂಡ ಹಲವಾರು ಹೂವಿನ ಅಂಗಡಿಗಳ ಮೇಲೆ ದಾಳಿ, ಕಿರಾಣಿ ಶಾಪ್ ಗಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಚೀಲಗಳನ್ನ ವಶಕ್ಕೆ ಪಡೆದುಕೊಂಡರು.

ಅದೇ ರೀತಿ ಮೂರು ಅಂಗಡಿ ಸರ್ಕಲ್ ಏರಿಯಾದ ಪೂಜಾ ಟ್ರೇಡರ್ಸ್ ನಲ್ಲಿ ಅಂಗಡಿಯಲ್ಲಿ ನೂರಾರು ಕೆಜಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೂಜಾ ಟ್ರೇಡರ್ಸ್ ಅಂಗಡಿ ಮೇಲೆ ದಾಳಿ ನಡೆಸಿದ ವೇಳೆ ನೂರಾರು ಕೆಜಿ ಪ್ಲಾಸ್ಟಿಕ್ ಚೀಲಗಳು ಪತ್ತೆ ಆಗಿವೆ. ಕೂಡಲೇ ಅವುಗಳನ್ನ ವಶಕ್ಕೆ ಪಡೆದು ಅಂಗಡಿಯನ್ನ ಸೀಜ್ ಮಾಡಿದರು. ಇದಕ್ಕೂ ಮೊದಲು ಹತ್ತಾರು ಬಾರಿ ಪೂಜಾ ಟ್ರೇಡರ್ಸ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಮಾರಾಟ ಮುಂದುವರೆಸಿದ್ದರು ಹೀಗಾಗಿ ಅಂಗಡಿ ಸೀಜ್ ಮಾಡಲಾಗಿದೆ ಎಂದು ನಗರ ಸಭೆ ಸಿಬ್ಬಂದಿ ಪರಿಸರ ಅಧಿಕಾರಿ ಆರತಿ ತಿಳಿಸಿದರು.

ಹೊಸಪೇಟೆ ಸಾರ್ವಜನಿಕರು ತ್ಯಾಜ್ಯ ಸಂಗ್ರಹಣೆ ಮಾಡುವ ವಾಹನಗಳಲ್ಲಿ ಕಸ ಹಾಕದೇ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ ಅಂತ ನಗರಸಭೆಗೆ ದೂರುಗಳು ಬರುತ್ತಿದ್ದವು. ಅದರ ಬಗ್ಗೆ ಎಚ್ಚತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನ ಖುದ್ದಾಗಿ ಹಿಡಿದು ಸ್ಥಳದಲ್ಲೇ ನೂರು ರೂಪಾಯಿಯಂತೆ ಕೆಲವರಿಗೆ ದಂಡ ವಸೂಲಿ ಮಾಡಲಾಗಿದೆ. ಚಿಕ್ಕಪುಟ್ಟ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟಗಾರರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಸೇರಿ ಇದುವರೆಗೆ ೧೫,೦೦೦ ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳಾದ ಹಿರೇಮಠ, ದಾದಾಪೀರ್, ಮೇಸ್ತ್ರಿಗಳಾದ ನಾಗೇಂದ್ರ ವರ್ಮಾ, ರಮೇಶ್ ಮತ್ತು ಪೌರಕಾರ್ಮಿಕ ಸಿಬ್ಬಂದಿ ಸೇರಿ ಇತರರರಿದ್ದರು.

Leave a Reply

Your email address will not be published. Required fields are marked *

error: Content is protected !!