ಶ್ರೀ ಹುಲಿಗೆಮ್ಮ ದೇವಿ ಪ್ರಾಧಿಕಾರದ ಮೊದಲಸಭೆ
ಶ್ರೀ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಮಹಾನಕ್ಷೆ ಕರಡು ಸಿದ್ಧ
ಕರುನಾಡ ಬೆಳಗು ಸುದ್ದಿ
ಕೊಪ್ಪಳ 30- ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದ್ದು ತಿಂಗಳಲ್ಲಿ ಕಾಮಗಾರಿ ಆರಂಬಿಸಲೂ ಕ್ರಮ ಕೈಗೋಳ್ಳುವುದಾಗಿ ಸಾರಿಗೆ ಹಾಗೂ ಹಿಂದೂ ಧಾರ್ಮಿಕ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಅವರು ಕೊಪ್ಪಳ ನಗರದಲ್ಲಿ ಶ್ರೀ ಹುಲಿಗೆಮ್ಮ ದೇವಿ ಪ್ರಾಧಿಕಾರದ ಮೊದಲಸಭೆಯಲ್ಲಿ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇವಾಲಯಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಮಂಗಳವಾರ, ಶುಕ್ರವಾರ, ಭಾನುವಾರ ರಜಾದಿನಗಳಂದು ಹೆಚ್ಚು ಭಕ್ತಾದಿಗಳು ಅದರಲ್ಲಿ ಹುಣ್ಣಿಮೆ ದಿನಗಳಂದು ಹಾಗೂ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಜನ ಆಗಮಿಸುತ್ತಿದ್ದು, ಕ್ಷೇತ್ರಕ್ಕೆ ಪ್ರತಿ ವರ್ಷ 70 ರಿಂದ 80 ಲಕ್ಷ ಭಕ್ತರು ಆಗಮಿಸುತ್ತಿದ್ದು ಭಕ್ತರಿಗೆ ಮೂಲಭೂತ ಸೌಲಭ್ಯ ಹಾಗೂ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೋಳ್ಳುವುದಾಗಿ ತಿಳಿಸದರು.
ಅಬಿವೃದ್ಧಿಗೆ ಮಾಸ್ಟರ್ಪ್ಲಾನ್ ತಯಾರಿಸಿದ್ದು ಇದನ್ನು ಪರಿಶೀಲಿಸಿ ಹಾಲಿ ದೇವಾಲಯಕ್ಕೆ ಸೇರಿದ 49.00 ಎಕರೆ ಜಾಗದಲ್ಲಿ ಸುಸಜ್ಜಿತ ಪಾರ್ಕಿಂಗ್ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ದೇವಾಲಯದ ಹತ್ತಿರದಲ್ಲಿ ಇರುವ ನಾಲೆಯನ್ನು ಭೂಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ ಶುಚಿತ್ವದ ದೃಷ್ಟಿಯಿಂದ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ.
ವಿಶೇಷ ದಿನಗಳಲ್ಲಿ ಬರುವ ಭಕ್ತಾದಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಹೆಚ್ಚುವರಿಯಾಗಿ 100 ಎಕರೆ ಜಮೀನನ್ನು ಹಂತಹಂತವಾಗಿ ಭೂಸ್ವಾಧೀನಪಡಿಸಿಕೊಳ್ಳಲು ಹಾಗೂ ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯ ಮುಂದೆ ಇಟ್ಟು ಇಲ್ಲಿ ಪರಾಮರ್ಶಿಸಿ ಸೂಕ್ತ ಬದಲಾವಣೆಗಳನ್ನು ಮಾಡಿ, ಅಂತಿಮಗೊಳಿಸಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ದೇವಾಲಯದ ಪುನರ್ ನಿರ್ಮಾಣದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಚರ್ಚಿಸಿ ಇದನ್ನು ಮತ್ತೊಮ್ಮೆ ವಾಸ್ತುಶಿಲ್ಪ ಸಮಿತಿ ಮುಂದೆ ಇಟ್ಟು ತೀರ್ಮಾನ ಕೈಗೊಳ್ಳಲು, ದೇವಾಲಯದಲ್ಲಿ ಚಂದ್ರಶಾಲೆ ಮತ್ತು ನಾಲ್ಕು ಗೋಪುರಗಳ ನಿರ್ಮಾಣವನ್ನು ಲೋಕೋಪಯೋಗಿ ಇಲಾಖಗೆ ವಹಿಸಿಕೊಡುವುದು, ಅವರಿಂದ ಅಂದಾಜುಪಟ್ಟಿ ಪಡೆದು ಪ್ರತಿಯೊಂದು ಕಾಮಗಾರಿಯನ್ನು ಮಾಸ್ಟರ್ಪ್ಲಾನ್ ಒಳಗೇ ಅಳವಡಿಸಿ ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು.
ದೇವಾಲಯಕ್ಕೆ ಸೇರಿದ ಜಾಗ ಖಾತೆಯನ್ನು ದೇವಾಲಯದ ಹೆಸರಿಗೆ ಮಾಡಿಕೊಡಬೇಕು. ನಂತರ ವಾಣಿಜ್ಯ ಪ್ರದೇಶಕ್ಕೆ ತೆರಿಗೆಯನ್ನು ಗ್ರಾಮ ಪಂಚಾಯತಿಗೆ ಪಾವತಿಸಲು ತೀರ್ಮಾನಿಸಲಾಯಿತು. ಅಂಗಡಿ ಮಳಿಗೆಗಳನ್ನು ಶೇಕಡಾ 20% ಬಾಡಿಗೆ ಹೆಚ್ಚಿಸಿ ಒಂದು ಬಾರಿಗೆ ಹಾಗೂ ಮುಂದಿನ ವರ್ಷ ಟೆಂಡರ್ ಮಾಡಲು ಹಾಗೂ ಯಾವುದೇ ಉಪಗುತ್ತಿಗೆ ಇರಬಾರದು ಎಂದು ಸೂಚಿಸಲಾಗಿದೆ.
ರಸ್ತೆ: 30 ಅಡಿ ಬೈಪಾಸ್ ರಸ್ತೆ ನಿರ್ಮಿಸಲು ಅಗತ್ಯವಿರುವ ವಿ: 1-02 ಎಕರೆ ಮತ್ತು ದೇವಾಲಯದ ಅಭಿವೃದ್ಧಿಗೆ ಅವಶ್ಯವಿರುವ ಜಮೀನು ಖರೀದಿಸಲು ಪರಸ್ಪರ ಒಪ್ಪಂದಂತೆ ಖರೀದಿಸಲು ಅಥವಾ ಭೂಸ್ವಾಧೀನ ನಿಯಮದಡಿಯಲ್ಲಿ ಭೂಸ್ವಾಧೀನ ಮಾಡಲು ಹಾಗೂ ಖಾಲಿ ಇರುವ ಹುದ್ದೆಗಳಿಗೆ ನಿಯಮಾನುಸಾರ ಅರ್ಜಿ ಕರೆದು ಸಮಿತಿಯಲ್ಲಿ ಪರಿಶೀಲಿಸಿ ಪ್ರಾಧಿಕಾರದ ಮುಂದೆ ಮಂಡಿಸಲು ಮತ್ತು ದೇವಾಲಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದಿಸಲು ಖಾಸಗಿ ವಕೀಲರನ್ನು ನೇಮಕ ಮಾಡಲು ಅಗತ್ಯ ಕ್ರಮ ವಹಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಸಭೆಯಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಕಲ್ಲಿನಿಂದ ಕಟ್ಟಡ ನಿರ್ಮಾಣ, ಚಂದ್ರಶಾಲೆ ಮತ್ತು ನಾಲ್ಕು ಗೋಪುರಗಳ ನಿರ್ಮಾಣ, ದೇವಾಲಯದ ಚಿಕ್ಕ ರಥಕ್ಕೆ ಬೆಳ್ಳಿಯ ಕವಚ ಮತ್ತು ಅಮ್ಮನ ಮೂಲ ಸನ್ನಿಧಿಯಲ್ಲಿರುವ ಮಂಟಪಕ್ಕೆ ಹೊಸದಾಗಿ ಮಂದಾಸನ ನಿರ್ಮಿಸಿ ಅದಕ್ಕೆ ಬೆಳ್ಳಿ ಕವಚ ಅಳವಡಿಸುವುದು, ಸೇರಿ ಭಕ್ತರಿಗೆ ಅನುಕೂಲವಾಗಲು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಇದರು.
ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ವೆಂಕಟೇಶ ಎಂ.ವಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಇತರರು ಇದ್ದರು.
ಪ್ರಮುಖ ನಿರ್ಣಯಗಳು
1] ದೇವಸ್ಥಾನಕ್ಕಾಗಿ ಹಂತ ಹಂತವಾಗಿ 100 ಏಕರೆ ಭೂ ಸ್ವಾಧಿನಕ್ಕೆ ಸೂಚನೆ
2] ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ .
3} ಶ್ರೀ ಹುಲಿಗೆಮ್ಮ ದೇವಿಗೆ ಬೆಳ್ಳಿ ರಥ ನಿರ್ಮಾಣಕ್ಕೆ ಸೂಚನೆ.