
ಜಿಲ್ಲಾ ಆಡಳಿತದಿಂದ ಪರಿಹಾರ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾಧ್ಯಕ್ಷ ಮಿಂಚು ಶ್ರೀನಿವಾಸ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಸ್ಥಳೀಯ ಲಾರಿಗಳಿಗೆ ಬಾಡಿಗೆ ನೀಡುವಲ್ಲಿ ಆದ್ಯತೆ ನೀಡಬೇಕು ಮತ್ತು ಸರಕು ಸಾಗಾಟದ ದರ ಹೆಚ್ಚಿಸಬೇಕು, ಹಾಗೂ ಓವರ್ಲೋಡ್ ಲಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಿನ್ನೆಯಿಂದ ಆರಂಭಿಸಿರುವ ಶಾಂತಿಯುತ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಮ್ಮ ಈ ಶಾಂತಿಯುತ ಪ್ರತಿಭಟನೆಗೆ ಕಾರ್ಖಾನೆಯ ಮಾಲೀಕರು ಸಹಕರಿಸುತ್ತಿಲ್ಲ ಮತ್ತು ಪ್ರತಿಭಟನೆ ಮಾಡುವುದಾದರೆ ಕಾರ್ಖಾನೆಯಿಂದ ಅನತಿ ದೂರದಲ್ಲಿ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ ಅದರಂತೆ ನಾವು ಸಾಂಗ್ ಐರನ್ ಕಾರ್ಖಾನೆಗಳಿಂದ ದೂರದಲ್ಲಿಯೇ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ, ಈಗಲಾದರೂ ಜಿಲ್ಲಾಡಳಿತ ನಮ್ಮ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಿಂಚಿ ಶ್ರೀನಿವಾಸ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಅವರು ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಲಾರಿ ಮಾಲೀಕರು ಈಗಾಗಲೇ ಡೀಸೆಲ್ ಬೆಲೆ ಏರಿಕೆಯಿಂದ, ಲಾರಿಗಳ ನಿರ್ವಹಣೆಯಿಂದ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದಾರೆ, ಕಳೆದ ಹಲವಾರು ವರ್ಷಗಳಿಂದ ಸ್ಪಂಜ್ ಐರನ್ ಫ್ಯಾಕ್ಟರಿ ಮಾಲೀಕರು ಲಾರಿ ಬಾಡಿಗೆ ಎಂದು ಹಳೆಯ ದರವನ್ನೇ ನೀಡುತ್ತಿದ್ದಾರೆ ಇದರಿಂದ ಲಾರಿಗಳ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿದೆ, ಈ ಹಿಂದೆ ಒಪ್ಪಂದವಾದಂತೆ ನಾಲ್ಕು ಪರ್ಸೆಂಟ್ ಹೆಚ್ಚುವರಿ ಬಾಡಿಗೆಯನ್ನು ನೀಡಬೇಕೆಂದು ಕಾರ್ಖಾನೆಗಳ ಮಾಲೀಕರಿಗೆ ಒತ್ತಾಯಿಸಿದರು.
ಅದೇ ರೀತಿಯಾಗಿ ಬಳ್ಳಾರಿ ಜಿಲ್ಲಾಡಳಿತ ಸಹ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಲಾರಿ ಮಾಲೀಕರಿಗೂ ಮತ್ತು ಪಾಂಚ್ ಐರನ್ ಫ್ಯಾಕ್ಟರಿಯ ಮಾಲೀಕರಗೂ ಇಬ್ಬರಿಗೂ ತೊಂದರೆಯಾಗದಂತೆ ರಾಜಿ ಸೂತ್ರದಿಂದ ಪರಿಹಾರವನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನೂರ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮೆಹಬೂಬ ಬಾಷ, ಖಜಾಂಚಿ ಪ್ರವೀಣಕುಮಾರ್, ಸದ್ಯಸರಾದ ಎಂ.ಡಿ. ಫಯಾಜ್, ನಾಗರಾಜ, ಪೂಜಾದೇವಿ ಶ್ರೀನಿವಾಸುಲು, ರಾಂಕುಮಾರ್ ಸೇರಿದಂತೆ ಹಲವರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.