ಯುವಕನ ಭಿಕರ ಹತ್ಯೆ
ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ದುಷ್ಕರ್ಮಿಗಳು
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 30- ರವಿವಾರ ರಾತ್ರಿ ಮಲಗಿರುವ ಸಮಯದಲ್ಲಿ ದುಷ್ಕರ್ಮಿಗಳು ಯುವಕನೋರ್ವನನ್ನು ಬೆಂಕಿ ಹಚ್ಚಿ ಅರ್ದಂರ್ಬರ್ಧ ಸುಟ್ಟು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾದ ಘಟನೆ ಕುಷ್ಟಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ದುರ್ಘಟನೆಯು ತಾಲೂಕಿನ ಹಿರೇಮನ್ನಾಪೂರದಲ್ಲಿ ನಡೆದಿದ್ದು ಹತ್ಯೆಗೊಳಗಾದ ಯುವಕನನ್ನು ಗ್ರಾಮದ ಶರಣಪ್ಪ ಶಿವಪ್ಪ ಮಸ್ಕಿ (೨೨) ಎಂದು ಗುರುತಿಸಲಾಗಿದ್ದು ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿರುವದಿಲ್ಲ ಈ ಘಟನೆಯು ಅನುಮಾನಸ್ಪಾದವಾಗಿದ್ದು ಘಟನಾ ಸ್ಥಳಕ್ಕೆ ಕುಷ್ಟಗಿಯ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸೈ ಹನಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳು, ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೇಗಾಗಿ ತನೀಖೆಯ ಜಾಲವನ್ನು ಬೀಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.