WhatsApp Image 2024-10-24 at 5.37.47 PM

ಆಕಳ ಕರು ರಕ್ಷಣೆಗೆ ಕ್ರಮವಹಿಸಿದ ಶಾಸಕ : ಸಮಯಕ್ಕೆ ರಕ್ಷಣೆ ನೀಡಿದ ಇಲಾಖೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 24- ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ಚಿಕ್ಕ ಆಕಳ ಕರು ರಕ್ಷಣೆಗೆ ಶಾಸಕರ ಕ್ರಮ, ಪಶು ಸಂಗೋಪನ ಇಲಾಖೆಯ ಅಧಿಕಾರಿಗಳ ಕಾರ್ಯದಕ್ಷತೆಯಿಂದ ಪ್ರಾಣಾಪಾಯದಿಂದ ಪಾರದ ಘಟನೆ ಇಂದು ನಗರದಲ್ಲಿ ನಡೆದಿದೆ.

ಬಸವೇಶ್ವರ ನಗರ ಬಡಾವಣೆಗೆ ಸೇರಿದ ರೇಣುಕಾಚಾರ್ಯ ನಗರ ಕಾಲೋನಿಯಲ್ಲಿ ಒಂದು ಆಕಳ ಕರ ಅನಾರೋಗ್ಯದಿಂದ ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿದ್ದ ವಿಷಯವನ್ನು ಕಾಲೋನಿ ನಿವಾಸಿಗಳು ಗಮನಿಸಿ ಸಂಬ0ಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾ ಪಶು ಸಂಗೋಪನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಡಾ.ವಿನೋದ್ ಗಮನಕ್ಕೆ ತರಲಾಯಿತು.

ಶಾಸಕ ನಾರಭರತ್ ರೆಡ್ಡಿ ಕಚೇರಿಗೆ ಕೂಡ ವಿಷಯವನ್ನು ತಿಳಿಸಿದಾಗ, ಶಾಸಕರ ಆಪ್ತ ಸಹಾಯಕರು ಕರು ರಕ್ಷಣೆಗಾಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಕರು ರಕ್ಷಣೆಗೆ ಮುಂದಾದರು. ಇಲ್ಲಿನ ಪರಿಸ್ಥಿತಿಯನ್ನು ಶಾಸಕ ನಾರಾ ಭರತ್ ರೆಡ್ಡಿ ಅವರು ಫೋನ್ ಮೂಲಕ ತಿಳಿದುಕೊಂಡು, ಅಧಿಕಾರಿಗಳಿಗೆ ಕರು ರಕ್ಷಣಕ್ಕಾಗಿ ಆದೇಶ ನೀಡಲಾಯಿತು.

ಕೂಡಲೇ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ, ಸಂಚಾರಿ ತುರ್ತು ಪಶುಚಿಕಿತ್ಸ ವಾಹನ (ಪಾಲಿ ಕ್ಲಿನಿಕ್) ಸ್ಥಳಕ್ಕೆ ದಾವಿಸಿ ಡಾ.ಮಧು ಮತ್ತು ವೈದ್ಯ ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದ ಆಕಳ ಕರುವನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಪ್ರಾಣಪಾಯದಿಂದ ಪಾರು ಮಾಡಿದರು.

ಈ ಸಂದರ್ಭದಲ್ಲಿ ಕಾಲೋನಿ ನಿವಾಸಿಗಳು ನಗರ ಶಾಸಕ ನಾರಾಭರತ್ ರೆಡ್ಡಿ ಮತ್ತು ಕಚೇರಿ ಸಿಬ್ಬಂದಿ, ಪಶು ಸಂಗೋಪನ ಇಲಾಖೆ ಸಿಬ್ಬಂದಿಗೆ ಧನ್ಯವಾದಗಳು ತಿಳಿಸಲಾಯಿತು.

ಕೋಟ್ಯಾಂತರ ರೂಪಾಯಿಗಳನ್ನು ವಿನಯೋಗಿಸಿ ರಾಜ್ಯ ಮತ್ತು ರಾಷ್ಟ್ರ ಸರ್ಕಾರ ಅನುಷ್ಠಾನ ಗೊಳಿಸುತ್ತಿರುವ ಯೋಜನೆಗಳು ಸರಿಯಾದ ಸಮಯದಲ್ಲಿ ವಿನಿಯೋಗವಾದರೆ ಮಾತ್ರ ಶ್ರಮಪಟ್ಟು ಅನುಷ್ಠಾನಗೊಳಿಸುತ್ತಿರುವ ಸರ್ಕಾರದ ಉದ್ದೇಶ ಸಫಲಿಕೃತವಾಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!