
ಕಾಂಗ್ರೆಸ್ಗೆ ಮತ ನೀಡಿದ ಪರಿಣಾಮ ಅಭಿವೃದ್ದಿ ಶೂನ್ಯವಾಗಿದೆ : ಜನಾರ್ಧನ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ಸಂಡೂರು ಉಪಚುನಾವಣೆಯ ಅಂಗವಾಗಿ ಇಂದು ಸಂಡೂರಿನ ಯಶವಂತನಗರ ಸೋಮಲಾಪುರ, ಬಂಡ್ರಿ, ಬಂಡ್ರಿ ಬಂಡ್ರಿಗೊಲ್ಲಾಪುರ, ಕೋಡಿಹಳ್ಳಿ, ಕಾಟಿನಕಂಬ ಹಾಗೂ ಉತ್ತರಮಲೈ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಪರವಾಗಿ ಗಂಗಾವತಿಯ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮತಯಾಚನೆ ಮಾಡಿದರು.
ಸ್ವಾತಂತ್ರ್ಯ ನಂತರದಿAದ ಇಲ್ಲಿಯವರೆಗೆ ಜನತೆ ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಪರಿಣಾಮ ಕ್ಷೇತ್ರದಲ್ಲಿ ಅಭಿವೃದ್ದಿ ಎನ್ನುವುದು ಶೂನ್ಯವಾಗಿದ್ದು ಈ ಬಾರಿ ಮಾದರಿ ಸಂಡೂರು ಕ್ಷೇತ್ರ ನಿರ್ಮಾಣಕ್ಕಾಗಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಸಹೋದರ ಕೆ.ಎಸ್.ದಿವಾಕರ್, ಮಂಡಲದ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಕಾಟಿನಕಂಬ ಗ್ರಾಮದ ಪ್ರಮುಖ ಭೀಮೇಶ, ದುರ್ಗಪ್ಪ, ಭರಮಪ್ಪ, ಲಕ್ಷಪ್ಪ, ಬಿ.ನಾಗರಾಜ, ಸಂತೋಷ, ನಾಯಕಪ್ಪ, ಅಂಗಡಿ ಹನುಮಪ್ಪ, ಉಜೆನಪ್ಪ, ಬಂಡ್ರಿಪ್ಪ, ಉತ್ತರಮಲೈ ಗ್ರಾಮದ ಪ್ರಮುಖ ಶಿವಣ್ಣ, ಬಸಪ್ಪ, ಮಾರೆಪ್ಪ, ಸಣ್ಣಬಸಪ್ಪ, ದುರ್ಗಪ್ಪ, ಸಣ್ಣ ಓಬ್ಬಪ್ಪ, ವೆಂಕಟೇಶ, ನಾಗಪ್ಪ ಸೇರಿದಂತೆ ಗ್ರಾಮಗಳ ಗುರು ಹಿರಿಯರ, ಪ್ರಮುಖರು ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು, ತಾಯಂದಿರು, ಯುವಕಮಿತ್ರರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.