WhatsApp Image 2024-11-15 at 5.24.04 PM

ರೈತರ ಜಮೀನು ರಕ್ಷಣೆಗೆ ಸರ್ಕಾರ ಕ್ರಮವಹಿಸಲಿ ರಾಜ್ಯ ರೈತ ಸಂಘದಿ0ದ ಒತ್ತಾಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 15- ರಾಜ್ಯಾದ್ಯಂತ ಹಲೋ ಭಾಗಗಳಲ್ಲಿ ಬಡ ರೈತರ ಜಮೀನುಗಳ ಪಹಣಿಗಳನ್ನು ವಖ್ಫ್ ಹೆಸರಿನಲ್ಲಿ ಬದಲಾಯಿಸುವುದನ್ನು ಖಂಡಿಸುತ್ತಾ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ನೇತೃತ್ವದಲ್ಲಿ ಜಿಲ್ಲಾ ಸಹಾಯಾಧಿಕಾರಿ, ಮಹಮ್ಮದ್ ಜುಬೇರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈಗಾಗಲೇ ರಾಜ್ಯಾದ್ಯಂತ ಈ ವಿಷಯಕ್ಕೆ ಸಂಬAಧಪಟ್ಟ ಹಲವಾರು ರೈತರ ಜಮೀನುಗಳ ಪಹಣಿಗಳು ಅವರಿಗೆ ತಿಳಿಯದೆ ವಖ್ಫ್ ಹೆಸರಿಗೆ ಬದಲಾವಣೆ ಮಾಡಿರುವುದು ಕಡು ವಿಚಾರಕರ ಎಂದರು.

ಕಷ್ಟಪಟ್ಟು ಉಳಿಮೆ ಮಾಡಿ ತಮಗೆ ಪಿತ್ರಾರ್ಜಿದರಿಂದ ಬಂದ ಜಮೀನುಗಳನ್ನು ಈ ರೀತಿ ಖಾತೆಗಳು ಬದಲಾವಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೇಂದ್ರ ರಾಜ್ಯ ಸರ್ಕಾರಗಳು ಕೂಡಲೇ ಈ ವಿಷಯದ ಮೇಲೆ ಗಮನಹರಿಸಿ ಯಾವುದೇ ರೈತರ ಜಮೀನುಗಳು ಈ ರೀತಿಯಾಗಿ ಬದಲಾವಣೆಗಳು ಆಗದಂತೆ ಕಠಿಣವಾದ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ತಪ್ಪಾಗಿ ರೈತರ ಹೆಸರನ್ನು ಪಹಣಿಗಳಿಂದ ತೆಗೆದು ವಖ್ಫ್ ಹೆಸರಿನಲ್ಲಿ ಬದಲಾವಣೆ ಮಾಡಿರುವ ರೈತರಗು ಕೂಡಲೇ ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಇನ್ನೂ ರಾಜ್ಯದ್ಯಂತ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ವಿವರಿಸಿತ್ತ ರೈತರು ಬತ್ತದ ಮೇಲೆ ಕಳೆದ ವರ್ಷ೨೫೦೦/- ರೂಪಾಯಿಗಳು ಕ್ವಿಂಟಲ್ಗೆ ಸರ್ಕಾರ ಧರೆ ನಿಗದಿ ಮಾಡಿತ್ತು, ಈ ವರ್ಷ ೧೮೦೦ ಕೂಡ ಕೇಳುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಈ ವಿಷಯದ ಮೇಲೆ ಗಮನಹರಿಸಿ ಕೂಡಲೇ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಸಲ ಸುಳ್ಳ ಮಾಡಿ ಬೇಸಾಯ ಮಾಡುತ್ತಿರುವ ರೈತರನ್ನು ರಕ್ಷಿಸಲು ಮುಂದಾಗಬೇಕೆ0ದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತಾಲೂಕ ಅಧ್ಯಕ್ಷರು, ಬೇವಿನ ಮರ ಎರಿಸ್ವಾಮಿ, ಖಜಾಂಚಿ ಮಾರಣ್ಣ, ಪದಾಧಿಕಾರಿಗಳು ತಿಮ್ಮಪ್ಪ ಮತ್ತು ಹಲವಾರು ಮಂದಿ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!