ನಾಲ್ಕನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30-ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿ ಮುಷ್ಕರವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ನೌಕರರಾದ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೆಳೆ ಸಮೀಕ್ಷೆ ಮಾಡಲು, ಬೆಳೆ ಹಾನಿ ಪರಿಹಾರ ನೀಡುವುದು, ಮಳೆ ಹನಿ ಪ್ರಕೃತಿ ವಿಕೋಪ, ಮಳೆಯಿಂದಾಗಿ ಮನೆಗಳ ಹಾನಿ, ಕಂದಾಯ ಜಮೀನಿಗೆ ಆಧಾರ್ ಜೋಡಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಿ ನಿಗದಿತ ಸಮಯದಲ್ಲಿ ಈ ಕಾರ್ಯಗಳನ್ನು ಮುಗಿಸಬೇಕೆಂದು ಗಡುವು ನೀಡಿ ಕೆಲಸದಲ್ಲಿ ಒತ್ತಡ ಹೇರಲಾಗುತ್ತಿದೆ ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳಲ್ಲಿ ಮಾತೃ ಇಲಾಖೆಯ ಕೆಲಸ ಮಾಡಲು ತೊಂದರೆಯಾಗುತ್ತಿದೆ ಕಾರಣ ಮಾತೃ ಇಲಾಖೆಯ ಕೆಲಸ ಹೊರತುಪಡಿಸಿ ಯಾವುದೇ ಇತರೆ ಇಲಾಖೆಯ ಕೆಲಸದ ಉಸ್ತುವಾರಿಯನ್ನು ನೀಡಬೇಡಿ ಎನ್ನುವುದರ ಜೊತೆಗೆ ತಮ್ಮ ಇತರೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿದ್ದ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಗರ ಕಂದಾಯ ಪರಿವೀಕ್ಷಕರಾದ ವೀರೇಶ್ ಮಾತನಾಡಿ, ಸರ್ಕಾರವು ನೀಡುತ್ತಿರುವ ಹಲವಾರು ಕೆಲಸಗಳ ಒತ್ತಡದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮತ್ತು ಹಲವು ಇಲಾಖೆಗಳ ವಿವಿಧ ಕಾರ್ಯಗಳನ್ನು ನಿರ್ವಹಿಸುವಂತೆ ಸಹ ನಮ್ಮ ಮೇಲೆ ಒತ್ತಡ ಇರುವುದರಿಂದ ನಮ್ಮ ಮಾತೃ ಇಲಾಖೆಯ ಕೆಲಸಕ್ಕೆ ಅಡಚಣೆ ಯಾಗುತ್ತಿದೆ. ಇದರಿಂದ ನಮಗೆ ನಮ್ಮ ಮೂಲ ಇಲಾಖೆಯ ಕೆಲಸವನ್ನು ಸರಾಗವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಕಾರಣ ನಮ್ಮನ್ನು ವಿವಿಧ ರೀತಿಯ ಕೆಲಸಗಳಿಗೆ ನಿಯೋಜಿಸದೆ ಕಂದಾಯ ಇಲಾಖೆಯ ಕೆಲಸಕ್ಕೆ ಮಾತ್ರ ನಿಯೋಜಿಸಬೇಕು ಮತ್ತು ಯಾವುದೇ ಗುರಿ ಮತ್ತು ಗಡುವನ್ನು ನೀಡಬಾರದು ಎಂದು ಕರ್ನಾಟಕ ರಾಜ್ಯ ಗ್ರಾಮ ಅಧಿಕಾರಿಗಳ ಸಂಘ ಬಳ್ಳಾರಿ ತಾಲೂಕ ಘಟಕದಿಂದ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟ ಅವಧಿ ಮುಷ್ಕರವನ್ನು ನಡೆಸುತ್ತಿದ್ದಾರೆ.
ಅಲ್ಲದೆ ಕಳೆದ ಎರಡು ಮೂರು ದಶಕಗಳಿಂದ ಇದೇ ಇಲಾಖೆಯಲ್ಲಿ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಪದೋನ್ನತಿ ನೀಡಿ ಗ್ರೇಡ್ ಒನ್ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಮೇಲ್ದರ್ಜೆಗೆ ಏರಿಸಬೇಕು, ಮೂರು ವರ್ಷಗಳ ಸೇವಾ ಅವಧಿಯನ್ನು ಪರಿಗಣಿಸಿ ಅಂತರ್ಜಿಲ್ಲ ವರ್ಗಾವಣೆಗೆ ಮಾರ್ಗ ಸೂಚಿಯನ್ನು ರಚಿಸಬೇಕು, ಆಹಾರ ಇಲಾಖೆ ಕೆಲಸವನ್ನು ಸಹ ನಾವು ನಿರ್ವಹಿಸುತ್ತೇವೆ ನಮ್ಮ ಸೇವಾ ಹಿರಿತನವನ್ನು ಪರಿಗಣಿಸಿ ಆಹಾರ ಇಲಾಖೆಯ ನಿರೀಕ್ಷಕ ಹುದ್ದೆಗೆ ಪದ ಉನ್ನತಿ ನೀಡಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿರುವಂತೆ 3000 ಆಪತ್ತಿನ ಬಟ್ಟೆ ನೀಡಬೇಕು, ನಮ್ಮ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಅದನ್ನು ರಾಜ್ಯ ಜೇಷ್ಠತೆಯನ್ನಾಗಿ ಪರಿಗಣಿಸಬೇಕು ಪ್ರಯಾಣ ಭತ್ತೆ 500 ರೂಪಾಯಿಗಳಿಂದ 3000 ಗೆ ಹೆಚ್ಚಿಸಬೇಕು, ಗ್ರಾಮ ಆಡಳೀತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು, ಗ್ರಾಮಾಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ ಸೌಕರ್ಯ, ಟೇಬಲ್, ಕುರ್ಚಿಗಳು, ಅಲ್ಮೆರಾ, ಒಳ್ಳೆಯ ಗುಣಮಟ್ಟದ ಮೊಬೈಲ್ ಫೋನ್, ಗೂಗಲ್ ಕ್ರೋಮ್ ಬುಕ್ ಲ್ಯಾಪ್‌ಟಾಪ್, ಹಾಗೂ ಪ್ರಿಂಟರ್ -ಸ್ಕ್ಯಾನರ್ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ
ನಾಲ್ಕನೇ ದಿನದ ಈ ಮುಷ್ಕರದಲ್ಲಿ, ವಿಲೇಜ್ ಅಕೌಂಟೆಂಟ್ ಅಸೋಸಿಯೇಷನ್ ಅಧ್ಯಕ್ಷರುರಾಮಪ್ಪ, ರೆವಿನ್ಯೂ ಅಸೋಸಿಯೇಷನ್ ಪದಾಧಿಕಾರಿಗಳು ವೀರೇಶ್, ಈಶ್ವರಪ್ಪ, ಡೆಪ್ಯೂಟಿ ತಹಸಿಲ್ದಾರ್ ಮಲ್ಲಿಕಾರ್ಜುನ್, ಸಿರುಗುಪ್ಪ ವಿಎ ಮಂಜುನಾಥ್, ಮತ್ತು ಸಿದ್ದಮ್ಮ ವಸುಂದರ ಆಶಾ ಜೋಶಿ ಶಿವಗಂಗಮ್ಮ ವೀಣಾ ಸಂಕ್ಷಿಪ್ತಾಗಳ ಜೊತೆಗೆ ಹಲವಾರು ಮಂದಿ ಪಾಲ್ಗೊಂಡಿದ್ದರು.