ಶಾಸಕ ಗಾಲಿ ಜನಾರ್ಧರೆಡ್ಡಿಗೆ ಬಿಗ ರಿಲಿಪ್ ನೀಡಿದ ಸುಪ್ರೀಂ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 30- ಶಾಸಕ ಗಾಲಿ ಜನಾರ್ಧನರೆಡ್ಡಿಗೆ ಬಿಗ್ ರೀಲಿಫ್ ಸಿಕ್ಕಿದ್ದು, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿ ಆದೇಶಿಸಿದೆ. ಸುಪ್ರೀಂಕೋರ್ಟ್ ಆದೇಶದ ಮಾಹಿತಿ ಪಡೆದಿರುವ ರೆಡ್ಡಿ ಬೆಂಬಲಿಗರು ಸಂತಸ ಹಂಚಿಕೊಂಡಿದ್ದಾರೆ.
ಅಕ್ರಮ ಗಣಿ ಪ್ರಕರಣದಲ್ಲಿ 12 ವರ್ಷ ವನವಾಸ ಅನುಭವಿಸಿದ್ದರೂ ಜೈಲಿನಿಂದ ಬಿಡುಗಡೆ ಮಾಡಿ ಜಾಮೀನು ನೀಡುವ ಸಂದರ್ಭದಲ್ಲಿ ಜನಾರ್ಧನರೆಡ್ಡಿ ತಮ್ಮ ಸ್ವಸ್ಥಾನ ಬಳ್ಳಾರಿ ಜಿಲ್ಲೆಗೆ ಪ್ರವೇಶ ಮಾಡದಂತೆ ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಯಿಂದ ಸ್ಪರ್ಧಿಸಿ ಶಾಸಕರಾಗಿರುವ ಜನಾರ್ಧನರೆಡ್ಡಿ ಬೆಂಗಳೂರಿನಲ್ಲಿ ತಮ್ಮ ಕುಟುಂಬಸ್ಥರೊAದಿಗೆ ವಾಸ್ತವ್ಯ ಮಾಡಿ ವಾರಕ್ಕೊಮ್ಮೆ ಗಂಗಾವತಿಗೆ ಆಗಮಿಸಿ ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ.
ಈಗ ಸುಪ್ರೀಂಕೋರ್ಟ್ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶ ಮಾಡಲು ಅನುಮತಿ ನೀಡಿ ಆದೇಶ ಮಾಡಿರುವುದರಿಂದ ಇನ್ನು ಮುಂದೆ ಗಂಗಾವತಿ ಕ್ಷೇತ್ರದ ಜನರಿಗೆ ಶಾಸಕರು ಇನ್ನು ಹತ್ತಿರವಾಗಲಿದ್ದಾರೆ ಎಂದು ಬೆಂಬಗಲಿಗರು ತಿಳಿದಿದ್ದಾರೆ.