
ಹಳ್ಳಕ್ಕೆ ಟಿಪ್ಪರ್ ಪಲ್ಟಿ : ಚಾಲಕ ಪ್ರಾಣಾಪಾಯದಿಂದ ಪಾರು
ಕರುನಾಡ ಬೆಳಗು ಸುದ್ದಿ
ಕುಕನೂರು, 24- ತಾಲೂಕು ಬಳಗೇರಿ ಗ್ರಾಮದ ಮರಳು ಪಾಯಿಂಟ್ ನಿಂದ ಮರುಳು ತುಂಬಿಕೊAಡು ಬರುತ್ತಿದ್ದ ಟಿಪ್ಪರ್ ಒಂದು ಬಳಗೇರಿ ಹಳ್ಳದ ಮೇಲೆ ಬರುತಾತಿದ್ದ ಸಂದರ್ಭದಲ್ಲಿ ಪಲ್ಟಿಯಾದ ಘಟನೆ ಮಂಗಳವಾರ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಜರುಗಿದೆ ಎನ್ನಲಾಗಿದೆ.
ಬಳಗೇರಿಯ ಹಳ್ಳದ ಬಳಿ ಇರುವ ಮರುಳು ಪಾಯಿಂಟ್‌ನಿ0ದ 12ಟನ್ ಮರುಳು ತುಂಬಿದ ಟಿಪ್ಪರ ಬಳಗೇರಿಯಿಂದ ಹಿರೇವಂಕಲಕುAಟಕ್ಕೆ ಹೋಗುತ್ತಿದ್ದ ವೇಳೆ ಹಳ್ಳದ ಮೇಲೆ ಹೋಗುವ ಸಂದರ್ಭದಲ್ಲಿ ಹಳ್ಳ ಕುಸಿದದರಿಂದ ಟಿಪ್ಪರ್ ಪಲ್ಟಿಯಾಗಿ ಬುಡ ಮೇಲಾಗಿ ಬಿದಿದ್ದು, ಚಾಲಕ ನೀಲಪ್ಪನ ಕಾಲು ಮುರಿದಿದ್ದು, ಯಾವುದೇ ಗಂಭೀರ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಿಪ್ಪರ್ ಚಾಲಕ ನೀಲಪ್ಪ ಮಲ್ಲಪ್ಪ ಹಿರ್ಯಾಳ ಆಗಿದ್ದು, ಟಿಪ್ಪರ್ ಇಲಕಲ್‌ನ ಮಹಾಂತೇಶ ಪಾಟೀಲ್ ಎನ್ನುವವರಿಗೆ ಸೇರಿದ ವಾಹನ ಜಖಂಗೊಡಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ೧೦೮ ದೌಡಾಯಿಸಿ ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಈ ಕುರಿತಂತೆ ಕುಕನೂರು ಠಾಣೆಯವರು ಆಸ್ಪತ್ರೆಗೆ ಭೇಟಿ ನೀಡಿದರು ಎಂದು ತಿಳಿದು ಬಂದಿದೆ.