
ತೆಕ್ಕಲಕೋಟೆ ಪ.ಪಂ. ಅಧ್ಯಕ್ಷೀಯ ಚುನಾವಣೆ ಸಂಸದ ರಾಜಶೇಖರ್ ಹಿಟ್ನಾಳ್ ಶಾಸಕ ಬಿ.ಎಂ.ನಾಗರಾಜ್ ಬಿಜೆಪಿ ಅಡ್ಡಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಗೆ ಮತದಾನ ಮಾಡಲು ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ್ ರಾಜಶೇಖರ್ ಹಿಟ್ನಾಳ್ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರನ್ನು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಮತ್ತು ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಪಟ್ಟಣ ಪಂಚಾಯತ್ ಒಳಗೆ ಬಿಡಲು ಒಪ್ಪಲಿಲ್ಲ ಕೆಲಕಾಲ ಗೊಂದಲ ಉಂಟಾದಾಗ ಚುನಾವಣಾ ಅಧಿಕಾರಿ ತಹಶೀಲ್ದಾರ್ ಎಚ್ ವಿಶ್ವನಾಥ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸೋಮಲಿಂಗಪ್ಪ ಅವರಿಗೆ ಹೇಳಿದಾಗ ಅವರು ನೀವು ಚುನಾವಣಾ ಕಾರ್ಯವನ್ನು ನಿಷ್ಪಕ್ಷವಾಗಿ ನಡೆಸಬೇಕು ಎಂದು ಆಗ್ರಹಿಸಿದರು.
ಪಟ್ಟು ಬಿಡದ ಬಿಜೆಪಿಗರು ಸಂಸದ್ ಹಾಗೂ ಶಾಸಕರನ್ನು ಒಳಗೆ ಬಿಡಲು ಒಪ್ಪಲಿಲ್ಲ ಇದರಿಂದ ಚುನಾವಣಾ ಅಧಿಕಾರಿ ಹಾಗೂ ಸಿಪಿಐ ಸುಂದರೇಶ್ ಒಳ್ಳೆ ಅಣ್ಣ ಹೊಳ್ಳೆಣ್ಣನವರ್ ಚುನಾವಣೆ ಪ್ರಕ್ರಿಯೆ ಕುರಿತು ತಮ್ಮ ಆಕ್ಷೇಪಗಳಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದರು ಅಂತಿಮವಾಗಿ ಮತ ಚಲಾಯಿಸಲು ತಡವಾಗಿ ಬಂದ ಕುರಿತು ಬರವಣಿಗೆಯಲ್ಲಿ ನೀಡಲು ಮಾಜಿ ಶಾಸಕ ಸೋಮಲಿಂಗಪ್ಪ ಆಗ್ರಹಿಸಿದರು.
ತಹಶೀಲ್ದಾರ್ ವಿಶ್ವನಾಥ್ ಈ ಕುರಿತು ಬರವಣಿಗೆಯಲ್ಲಿ ಕೊಡುವುದಾಗಿ ಒಪ್ಪಿಕೊಂಡ ಮೇಲೆ ಸಂಸದ್ ಹಾಗೂ ಶಾಸಕರನ್ನು ಮತದಾನ ಮಾಡಲು ಒಳಗೆ ಬಿಡಲಾಯಿತು.