1

ಭಾರತದ ರಾಕೆಟ್ ಫಿರಂಗಿಗಳ ಪ್ರವರ್ತಕ ಟಿಪ್ಪು ಸುಲ್ತಾನ್ : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 10- ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ರತಿಮಾ ಸ್ವಾತಂತ್ರ‍್ಯ ಸೇನಾನಿ ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಮಕ್ಕಳನ್ನು ಒತ್ತೆಯಿಡಲು ಹಿಂಜರಿಯದ ಮಹಾನ್ ರಾಜ ದಕ್ಷ ಆಡಳಿತಗಾರ ಜಾತ್ಯಾತೀತರಾಗಿ ಸರ್ವಧರ್ಮಗಳನ್ನು ಸಮಾನವಾಗಿ ಕಂಡ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.

ನಗರದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಸ್ಮರಿಸಿ ಅವರು ಮಾತನಾಡುತ್ತಾ, ಟಿಪ್ಪು ಸುಲ್ತಾನ್ ಅವರು ಸುಲ್ತಾನ್ ಫತೇಹ್ ಅಲಿ ಸಾಹಬ್ ಟಿಪ್ಪು ಸಾಮಾನ್ಯವಾಗಿ ಶೇರೆ ಮೈಸೂರು ಅಥವಾ ಮೈಸೂರು ಹುಲಿ ಅವರು ಮೈಸೂರು ಸಾಮ್ರಾಜ್ಯದ ಭಾರತೀಯ ಆಡಳಿತಗಾರರಾಗಿದ್ದರು ದಕ್ಷಿಣ ಭಾರತದಲ್ಲಿ ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದರು ಎಂದರು.

ಬಳ್ಳಾರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ನಗರಸಭಾ ಮಾಜಿ ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಗೊರವರ, ಶ್ರೀನಿವಾಸ್, ಮೋದಿನ್ ಹಂಡಿ, ಹುಸೇನ್ ಸಾಬ್ ರಂಜಾನ್, ನಗರಸಭಾ ಸದಸ್ಯ ಹೆಚ್.ಗಣೇಶ್, ಮೈಸೂರು ಹುಲಿ ಟಿಪ್ಪು ಸುಲ್ತಾನ್ ರಾಜ್ಯ ಪ್ರಶಸ್ತಿ ಪುರಸ್ಕೃತ ಅಬ್ದುಲ್ ನಬಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ತಾಲೂಕು ಅಧ್ಯಕ್ಷ ಇಬ್ರಾಹಿಂಪುರ್ ಹಮೀದ್ ಸಾಬ್, ಉಪಾಧ್ಯಕ್ಷ ಎನ್.ಎಸ್.ಸಲೀಂ ಮತ್ತಿತರ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!