
ನಾಳೆ ಗಣೇಶ ಉತ್ಸವ, ಈದ್ ಮಿಲಾದ್ ಆಚರಣೆಯ ಶಾಂತಿ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ನಗರದ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಬಳ್ಳಾರಿ ಜಿಲ್ಲಾ ಪೊಲೀಸ್ ಸಿರುಗುಪ್ಪ ಉಪ ವಿಭಾಗ ಪೊಲೀಸ್ ಠಾಣೆ ಸಿರುಗುಪ್ಪ ಇವರ ಸಹಯೋಗದಲ್ಲಿ ಶಾಂತಿ ಪಾಲನ ಸಭೆ ನಡೆಯುವುದು.
ಗಣೇಶ ಉತ್ಸವ, ಈದ್ ಮೀಲಾದ್ ಆಚರಣೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭ ರಾಣಿ ಅವರ ನೇತೃತ್ವದಲ್ಲಿ ಸೆ.೩ ರಂದು ಬೆಳಿಗ್ಗೆ ೧೧ ಗಂಟೆಗೆ ಕರೆಯಲಾಗಿದೆ.
ಶಾಂತಿ ಸಭೆಗೆ ಸಾರ್ವಜನಿಕರು ಗಣ್ಯರು ಭಾಗವಹಿಸಿ ತಮ್ಮ ಅನಿಸಿಕೆ ಸಲಹೆ ಸೂಚನೆ ನೀಡಿ ಗಣೇಶ ಉತ್ಸವ ಈದ್ ಮಿಲಾದ್ ಹಬ್ಬಗಳ ಆಚರಣೆ ಯಶಸ್ವಿಗೊಳಿಸಬೇಕು ಎಂದು ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ ಅವರು ಮನವಿ ಮಾಡಿದರು.