
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ವಿವಿಧ ವಿಷಯ ಕಾಮಗಾರಿಗಳ ಚರ್ಚೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.
ತೆಕ್ಕಲಕೋಟೆ ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಯ ಮಲ್ಲಯ್ಯ ಗುಡಿ ರಸ್ತೆಯಲ್ಲಿ ಬರುವ ಮುಖ್ಯಾ ಧಿಕಾರಿಗಳ ವಸತಿ ಗೃಹ ಮತ್ತು ಕಿರಿಯ ಅಭಿಯಂತರ ವಸತಿ ಗೃಹಗಳ ನಿರ್ಮಾಣ ಮತ್ತು ಸಾರ್ವಜನಿಕ ಕುಡಿಯುವ ನೀರಿನ ಓವರ್ ಟ್ಯಾಂಕ್ ನ್ನು ನಿರ್ಮಾಣ ಮಾಡುವುದು.
ಮಹಿಳಾ ಹೊಲಿಗೆ ಯಂತ್ರ ಘಟಕ ಗಾರ್ಮೆಂಟ್ಸ್ ನ್ನು ಲೀಜ್ ಗೆ ಮೂಲಕ ನೀಡುವುದು ಪಟ್ಟಣ ಪಂಚಾಯತಿನ ಸ್ರಾಪ್ ವಸ್ತು ಗಳನ್ನು ಹರಾಜು ಮಾಡುವುದು.
ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ದುರಸ್ತಿ ಗೊಂಡಿರುವ ಉಗ್ರಾಣವನ್ನು ದುರಸ್ತಿ ಪಡಿಸಿ ಪಟ್ಟಣದಲ್ಲಿ ಅಂಚೆ ಕಛೇರಿಗೆ ನೀಡುವುದು.
ಐ.ಡಿ.ಎಸ್ ಎಮ್.ಟಿ ಮತ್ತು 10ನೇ ಹಣಕಾಸು ವಾಣಿಜ್ಯ ಮಳಿಗೆಗಳನ್ನು ವಸೂಲಾತಿ ಮೊತ್ತದಲ್ಲಿ ಒಟ್ಟು 45 ಮಳಿಗೆಗಳನ್ನು ದುರಸ್ತಿಗೊಳಿಸುವುದು 2019-20ನೇ ಸಾಲಿನ ಎಸ್ ಎಫ್ ಸಿ ಅನುದಾನದ ಉಳಿತಾಯ ಮೊತ್ತಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸುವುದು.
2023- 24ನೇ ಸಾಲಿನ 15ನೇ ಹಣಕಾಸು ನಿರ್ಬಂದಿತ ಅನುದಾನ ರೂ.90.00 ಲಕ್ಷಗಳ ಕೈಬಿಟ್ಟ ಕಾಮಗಾರಿಗಳ ಪರಿಷ್ಕೃತ ಕ್ರಿಯಾಯೋಜನೆ ತಯಾರಿಸುವುದು 2024 -25ನೇ ಸಾಲಿನ 15ನೇ ಹಣಕಾಸು ನಿರ್ಬಂಧಿತ ಅನುದಾನ 45.40 ಲಕ್ಷಗಳ ಕ್ರಿಯಾಯೋಜನೆ ತಯಾರಿಸುವುದು.
2022-23 ನೇ ಸಾಲಿನ 15ನೇ ಹಣಕಾಸು ನಿರ್ಬಂಧಿತ ಅನುದಾನದಡಿ 14,00 ಲಕ್ಷ ಕೆ.ಯು.ಡಬ್ಲ್ಯೂ .ಎಸ್ ಸಿ.ಡಿ.ಬಿ ಇವರಿಗೆ ಪಾವತಿಸಿರುವುದು.
2023-24ನೇಸಾಲಿನ ಎಸ್ ಎಫ್ ಸಿ ಅನುದಾನದಡಿ 12ನೇ ವಾರ್ಡಿನಲ್ಲಿ ಬರುವ ರೂ. 15 ಲಕ್ಷಗಳ ಕೈಬಿಟ್ಟ ಕಾಮಗಾರಿಯ ಪರಿಷ್ಕೃತ ಕ್ರಿಯಾಯೋಜನೆ ತಯಾರಿಸುವುದು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಮಹಿಳಾ ಸಾಮೂಹಿಕ ಶೌಚಾಲಯ ನಿರ್ವಹಣೆ ಮಾಡುವುದು.
ಪಟ್ಟಣದಲ್ಲಿ ಅಕ್ರಮವಾಗಿ ಹಾಕುತ್ತಿರುವ ಬ್ಯಾನರ್ ಬಟ್ಟಿಂಗ್ ಮತ್ತು ಗೋಡೆ ಬರಹಗಳು ಬಗ್ಗೆ ಸರ್ಕಾರಿ ನಿಯಮ ಕಡ್ಡಾಯವಾಗಿ ಖಾಸಗಿ ಸಂಸ್ಥೆಗಳಿಗೆ ಶುಲ್ಕ ವಿಧಿಸುವುದು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅನದಿಕೃತವಾಗಿರುವ ಪರವಾನಿಗೆ ಪಡೆಯದೇ ಇರುವ ಕಿರಾಣಿ ಅಂಗಡಿ ಬೀಡಿ ಅಂಗಡಿ ಮತ್ತು ಉಪಹಾರ ಟಿಫನ್ ಸೆಂಟರ್ ಗಳಿಗೆ ಶುಲ್ಕ ವಿಧಿಸುವುದು ಹೊಸದಾಗಿ ನಿರ್ಮಿಸಿರುವ ವಾಲ್ಮೀಕಿ ಭವನದ ಸುತ್ತಲು ಇರುವ ಸರ್ಕಾರಿ ಜಾಗವನ್ನು ಸರಹದ್ದು ನಿರ್ಮಿಸಿ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಸಭೆ ಸಮಾರಂಭಗಳನ್ನು ಮಾಡಲು ಅನುಕೂಲ ಮಾಡುವುದು.
ಪಟ್ಟಣದಲ್ಲಿ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಅಂಗಡಿ ಮಾಲೀಕರು ಕಾರ್ಯನಿರ್ವಹಿಸುವುದು ಪಟ್ಟಣದಲ್ಲಿ ಅಕ್ರಮವಾಗಿ ಟವರ್ ಹಾಕಿರುವ ಮಾಲೀಕರ ವಿರುದ್ಧ ಕಾನೂನು ರೀತ್ಯ ಶುಲ್ಕ ವಿಧಿಸಿ ಕ್ರಮ ಕೈಗೊಂಡ ಸಕ್ರಮಗೊಳಿಸುವುದು.
ಪಟ್ಟಣ ಪಂಚಾಯತಿ ವತಿಯಿಂದ ನಿರ್ಮಿಸಿರುವ ಐ ಡಿ ಎಂ ಟಿ ಮಳಿಗೆ ಹಿಂಭಾಗ ನಿರ್ಮಿಸಿರುವ ಸಮುದಾಯ ಭವನದಲ್ಲಿ ಸಾರ್ವಜನಿಕರ ವಿದ್ಯಾರ್ಥಿ ನಿಲಯಕ್ಕೆ ಶುಲ್ಕ ವಿಧಿಸು ವುದು ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ಬರುವ ಖಾಸಿಗಿ ವಿದ್ಯಾ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು.
2023-24ನೇ ಸಾಲಿನ ಎಸ್ ಎಫ್ ಸಿ 2024-25ನೇಎಸ್ ಎಫ್ ಸಿ ಮತ್ತು 15 ನೇ ಹಣಕಾಸು ಅನುದಾನದಡಿ ಟೆಂಡರ್ ದರಗಳ ಅನುಮೋದನೆ ನೀಡುವ ವಿಷಯಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಚರ್ಚಿಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯ ಧಿಕಾರಿ ಪರಶುರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್. ಆನಂದ ಉಪಾಧ್ಯಕ್ಷೆ ದೊಡ್ಡ ರುದ್ರಮ್ಮ ಕಂದಾಯ ಇಲಾಖೆಯ ಶಿವುರಾಜ ಅಂಚೆ ಅಧೀಕ್ಷಕ ಚಿದಾನಂದ ಅಂಚೆ ಪರಿವೀಕ್ಷಕ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ನಾಮನಿರ್ದೇಶನ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.