
ತಾಂಡಾದ ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳ ಕುರಿತು ತರಬೇತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ತಾಲೂಕಿನ ಗಿಣೀಗೇರಿ ಗ್ರಾಮದಲ್ಲಿ ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಸಂಸ್ಥೆ ಹಾಗೂ ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಸಹಯೋಗದಲ್ಲಿ ತಾಂಡಾದ ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಂಜಿತಾ ಚೌವ್ಹಾಣ್ ಅಧ್ಯಕ್ಷೆತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ತಾಲೂಕ ಸಂಪನ್ಮೂಲ ವ್ಯಕ್ತಿಗಳಾದ ಹೊನ್ನುಂಚಿ ಹಾಗೂ ಅಕ್ಕಮಹಾದೇವಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ ನಾಯ್ಕ, ಯಮನೂರಪ್ಪ ಚವಾಣ್, ವೆಡ್ಸ್ ಸಂಸ್ಥೆ ಅಧ್ಯಕ್ಷ ವಿ ಚಕ್ರಪಾಣಿ, ವಿರೇಶ ಹಾಲ ಗುಂಡಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾರುತಿ ವೈ ಇವರು ಗ್ರಾಮೀಣ ಪ್ರದೇಶದ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾವಹಿಸಿದ್ದಲ್ಲಿ ಮಾತ್ರ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸುವ ಮೂಲಕ ಮಹಿಳೆಯರಿಗೆ ಜಾಗ್ರತಿ ಮೂಡಿಸಿದರು.
ಈ ನಿಟ್ಟಿನಲ್ಲಿ ನಮ್ಮ ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಸಂಸ್ಥೆಯವರು ಸಿಎಸ್‌ಆರ್ ಚಟುವಟಿಕೆಗಳ (ಅSಖ-ಅoಡಿಠಿoಡಿಚಿಣe Soಛಿiಚಿಟ ಖesಠಿoಟಿsibiಟiಣies) ಮೂಲಕ ಆದಾಯ ಉತ್ಪನ್ನ ತರಬೇತಿ ಕಾರ್ಯಕ್ರಮಗಳನ್ನು ಮತ್ತು ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ ಹೀಗೆ ವಿವಿಧ ಕ್ಷೆತ್ರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆಗೆ ಉತ್ತೇಜನ ನೀಡುವ ಮೂಲಕ ಸಹಕಾರ ನೀಡಿದೆ.
ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿ.ಚಕ್ರಪಾಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರ್ಥಿಕವಾಗಿ ಸ್ವಾವಲಂಬನೆ ಪಡೆದುಕೊಂಡು ತನ್ನ ಕುಟುಂಬದ ಆದಾಯ ಉತ್ಪನ್ನ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಸದುಪಯೋಗವನ್ನು ಪಡೆಯಬಹುದಾಗಿದೆ ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಕೊಪ್ಪಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ತಾಂಡಾದ ಮಹಿಳೆಯರು ಉತ್ತಮವಾದ ಮಾಹಿತಿ ಪಡೆದು ತಾವುಗಳು ಸೌಲಭ್ಯವನ್ನು ಪಡೆಯಬಹುದು ಎಂದು ತಿಳಿಸಿದರು.
ವೀರೇಶ ಹಾಲಗುಂಡಿ ಕಾರ್ಯಕ್ರಮ ನಿರೂಪಿಸಿದರು, ಈ ಕಾರ್ಯಕ್ರಮದಲ್ಲಿ ತಾಂಡಾದ ಮಹಿಳೆಯರು ಬಾಗವಹಿಸಿ ಯಶಸ್ವಿಗೊಳಿಸಿದರು.