
Oplus_131072
ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಗುಪ್ತಾಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30-ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ನೂತನವಾಗಿ ನಗರ ಪ್ರಾಧಿಕಾರ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಅವರಿಗೆ ಕೊಪ್ಪಳ ನಗರಸಭೆ ಆಶ್ರಯ ಸಮಿತಿ ನಾಮ ನಿರ್ದೇಶಿತ ಸದಸ್ಯ ಹುಸೇನ್ ಫೀರಾ, ಪರಶುರಾಮ್ ಕೆರೆಹಳ್ಳಿ, ಶ್ರೀನಿವಾಸ ಪಂಡಿತ, ಶ್ರೀಮತಿ ಪದ್ಮಾವತಿ ಕಂಬಳಿ ಮತ್ತು ಭಾಗ್ಯನಗರ ಪಟ್ಟಣ ಪಂಚಾಯತಿಯ ಆಶ್ರಯ ಸಮಿತಿ ಸದಸ್ಯರಾದ ಶ್ರೀಮತಿ ಕಾವೇರಿ ರಾಗಿ ಮತ್ತು ಮಾಜಿ ಸದಸ್ಯ ಚೆನ್ನಪ್ಪ ತಟ್ಟಿ ಸನ್ಮಾನಿಸಿ ಗೌರವಿಸಿದರು.
ಶ್ರೀನಿವಾಸ ಪಂಡಿತ ಮಾತನಾಡಿ ಗುಪ್ತಾ ಅವರಿಗೆ ಸರ್ಕಾರ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ನಮಗೆ ಖುಷಿಯ ವಿಷಯ ಎಂದು ಅಭಿನಂದನೆಗಳನ್ನು ಸಲ್ಲಿಸಿದರು. ಶ್ರೀನಿವಾಸ ಗುಪ್ತಾ ಅವರು ಮುಂದಿನ ದಿನಗಳಲ್ಲಿ ಹೊಸ ಲೇ ಔಟ್ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆಂದು ಭರವಸೆ ಇದೆ ಎಂದು ನುಡಿದರು.
ಶ್ರೀನಿವಾಸ ಗುಪ್ತಾ ಅವರು ಮಾತನಾಡಿ ಪ್ರಾಧಿಕಾರಕ್ಕೆ ನನ್ನನ್ನು ನೇಮಕ ಮಾಡಿದ್ದು ನನಗೆ ಖುಷಿ ತಂದಿದೆ ಮತ್ತು ಬಹಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಪರಶುರಾಮ ಸ್ವಾಗತಿಸಿದರು, ಹುಸೇನ್ ಪೀರಾ ವಂದಿಸಿದರು.