
ಅಪರಿಚಿತ ಶವ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಕೊಪ್ಪಳದ ಮುನಿರಾಬಾದ್ ಮತ್ತು ಹೊಸೆಪೇಟೆ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲಿಗೆ ಸಿಲುಕಿ ಸುಮಾರು ೪೦ ರಿಂದ ೪೫ ವರ್ಷದ ಅಪರಿಚಿತ ಪುರುಷ ಮೃತಪಟ್ಟ ಬಗ್ಗೆ ಗದಗ ರೈಲ್ವೇ ಪೋಲಿಸ್ ಠಾಣೆಯಲ್ಲಿ ಯು.ಡಿ.ಆರ್ ನಂ:೫೭/೨೦೨೪ ಕಲಂ ೧೯೪ ಬಿ.ಎನ್.ಎಸ್.ಎಸ್ ಅಡಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಚಹರೆ : ಮೃತ ವ್ಯಕ್ತಿಯು ಕೋಲುಮುಖ, ಸಾಧಾರಣ ಮೈ ಕಟ್ಟು ,ಗೋಧಿ ಮೈ ಬಣ್ಣ, ಹಾಗೂ ಮೈಮೇಲೆ ಬಿಳಿ ಬಣ್ಣ ಮತ್ತು ಹಳದಿ ಮಿಶ್ರಿತ ಕಲರಿನ ಪುಲ್ ಶರ್ಟ್ ಹಾಗೂ ನೀಲಿ ಬಣ್ಣದ ಕಲರಿನ ಚೆಕ್ಸ ಗೆರೆಯುಳ್ಳ ಲುಂಗಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ಪುರುಷನು ಕಾಣೆಯಾದಲ್ಲಿ ಕೂಡಲೇ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: ೦೮೩೭೨-೨೭೮೭೪೪, ಮೊ.ಸಂ : ೯೪೮೦೮೦೨೧೨೮, ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: ೦೮೦-೨೨೮೭೧೨೯೧ ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.