
ಕ.ಕ.ರ.ಸಾ. ನಿಗಮದ ವಾಹನಗಳಿಗೆ ನಾಣ್ಣುಡಿಗಳ ಅನಾವರಣ, ಅಳವಡಿಕೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 3- ಜಿಲ್ಲೆಯ ಕೊಟ್ಟೂರು ನಿವಾಸಿ ಖ್ಯಾತ ಸಾಹಿತಿಗಳು, ಲೇಖಕ ಡಾ.ಕುಂ.ವೀರಭದ್ರಪ್ಪ ಹಾಗೂ ಕಲಬುರಗಿ ಕ.ಕ.ರ.ಸಾ ನಿಗಮ, ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಎನ್.ರಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಲ್ಲಿ ನಿಗಮದ ನೂತನ ವಾಹನಗಳಿಗೆ ಜನಮಾನಸ ನಾಣ್ಣುಡಿಗಳ ಅನಾವರಣ ಹಾಗೂ ಅಳವಡಿಕೆ ಕಾರ್ಯಕ್ರಮ ನಡೆಯಿತು.
ಸನ್ಮಾನ : ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ ಕುಂ.ವೀರಭದ್ರಪ್ಪ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಆನಂದ ಭಂದ್ರಕಾಳಿ, ಕ.ಕ.ರ.ಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಸೇರಿದಂತೆ ನಿಗಮದ ಕೇಂದ್ರ ಕಚೇರಿಯ ಇಲಾಖಾ ಮುಖ್ಯಸ್ಥರು ಹಾಗೂ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.