ಸಂಗನಕಲ್ಲು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ವಿ.ಗೋವಿಂದಮ್ಮ ನಾಗಿರೆಡ್ಡಿ ಅವಿರೋಧವಾಗಿ ಆಯ್ಕೆ

ಕರುನಾಡ ಬೆಲಗು ಸುದ್ದಿ

ಬಳ್ಳಾರಿ,ಡಿ.02 -ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಗನಕಲ್ಲು ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ವಿ.ಗೋವಿಂದಮ್ಮ ನಾಗಿರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಚಿವರು ಹಾಗೂ ಶಾಸಕರಾದ ಬಿ.ನಾಗೇಂದ್ರರವರ ಸಂಪೂರ್ಣ ಸಹಕಾರದೊಂದಿಗೆ ಹಾಗೂ ಸಂಗನಕಲ್ಲು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಮಾಜಿ ಸದಸ್ಯರಾದ ಎ.ಮಾನಯ್ಯಾ, ಚಲುವಾದಿ ಸಮುದಾಯದ ಮುಖಂಡ ನರಸಪ್ಪ ಅವರ ಸಹಕಾರದಿಂದ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು.

ಇದೇ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋವಿಂದಮ್ಮ ನಾಗಿರೆಡ್ಡಿ, ಮಾತನಾಡಿ ಸುಮಾರು ವರ್ಷಗಳ ನಂತರ ನಮ್ಮ ಬೋವಿ ಸಮಾಜಕ್ಕೆ ಅಧ್ಯಕ್ಷ ಸ್ಥಾನ ದೊರೆತಿದೆ ಇದರಿಂದ ನನಗೆ ನಮ್ಮ ಮನೆಯವರಿಗೆ ಮತ್ತು ನಮ್ಮ ಸಮಾಜಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಖಂಡರಾದ ನಾಗಿ ರೆಡ್ಡಿ ಮಾತನಾಡಿ ನಮ್ಮ ಜನಾಂಗದ ಒಬ್ಬರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಿಕ್ಕಿದೆ ಇದರಿಂದ ನಮ್ಮ ಸಮಾಜಕ್ಕೆ ಸಂತಸವಾಗಿದೆ ಎಲ್ಲರೂ ಸೇರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಿಕೊಂಡು ಹೋಗುತ್ತೇವೆ ಎಂದರು.

ಇದಕ್ಕೆ ಕಾರಣರಾದ ನಮ್ಮ ಗ್ರಾಮೀಣ ಕ್ಷೇತ್ರದ ಯುವ ನಾಯಕರು ಹಾಗೂ ಶಾಸಕರಾದ ಬಿ.ನಾಗೇಂದ್ರ ಅಣ್ಣನವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇವೆ ಎಂದು ಹೇಳಿದರು. ಅಲ್ಲದೆ ನಮಗೆ ಸಹಕಾರ ನೀಡಿದ ಪಂಚಾಯತಿ ಸರ್ವ ಸದಸ್ಯರಿಗೆ ಮತ್ತು ಮುಖಂಡರಿಗೆ ಅಭಿನಂದನೆಗಳನ್ನ ತಿಳಿಸಿ ಅಭಿವೃದ್ಧಿಗಾಗಿ ನಾವು ಎಲ್ಲರೊಂದಿಗೆ ನಡೆದು ಕೊಂಡು ಹೋಗುತ್ತೇವೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎ ಮಾನಯ್ಯ, ಕಾಂಗ್ರೇಸ್ ಪಕ್ಷದ ಮುಖಂಡರಾದ ಪಿ.ಜಗನ್, ಗೋವರ್ಧನ ರೆಡ್ಡಿ, ಶ್ರೀನಾಥ್, ಚಿನ್ನ, ವಿ.ತಿಮ್ಮಪ್ಪ, ಹಾಗೂ ಊರಿನ ಮುಖಂಡರಾದ ಯುಧಿಷ್ಟರ, ಜೋಗಿನ ಈಶ್ವರಪ್ಪ, ವಿಶ್ವನಾಥ ಗೌಡ, ಮಸ್ತಾನ್ ವಲಿ, ಸಣ್ಣ ಈರಣ್ಣ, ಯು.ತಿಮ್ಮಪ್ಪ, ಯು.ಕೃಷ್ಣಪ್ಪ, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿ. ರಾಮಾಂಜನೇಯಲು, ವಿ. ಗಾದಿಲಿಂಗ, ಚಲವಾದಿ ನರಸಪ್ಪ, ರಾಮಾಂಜನೇಯಲು, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಚಿದಾನಂದಪ್ಪ, ಉಪಾಧ್ಯಕ್ಷ ಸಂಗನಕಲ್ ವಿಜಯಕುಮಾರ್, ನಾಮನಿರ್ದೇಶನ ಸದಸ್ಯ ಚಂದ್ರು, ವೈ.ತಿಮ್ಮಾರೆಡ್ಡಿ, ಶಿವರಾಮರೆಡ್ಡಿ, ಗಂಗಾಧರ, ಪುನೀತು, ಸಣ್ಣ ಹನುಮಂತ, ಬಿ.ಬುಗ್ಗಯ್ಯ ಬಿ.ಸುಂಕಯ್ಯ, ದೊಡ್ಡ ಹನುಮಂತ ಸೇರಿದಂತೆ ಹಲವಾರು ಇದ್ದರು.

Leave a Reply

Your email address will not be published. Required fields are marked *

error: Content is protected !!