
ಆ.5 ರಿಂದ ಆ.15ರ ವರೆಗೆ ವಚನ ಶ್ರಾವಣ ಕಾರ್ಯಕ್ರಮ
ಬಸವ ಸಮಿತಿ ಕುಷ್ಟಗಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಇವರ ಸಹಯೋಗದೊಂದಿಗೆ ಶ್ರಾವಣ ಮಾಸದ ಅಂಗವಾಗಿ ಶರಣ ಶ್ರೀ ರೇವಣಸಿದ್ಧ ಸ್ವಾಮಿಗಳು ಗುಡೂರ ಇವರಿಂದ ವಚನ ಶ್ರಾವಣ ಕಾರ್ಯಕ್ರಮವನ್ನು ಇದೇ ದಿ. 05-08-2024ರಿಂದ 15-08-2024 ರವರೆಗೆ ಪ್ರತಿದಿನ ಸಾಯಂಕಾಲ 6:30 ರಿಂದ 7:30ರ ವರೆಗೆ ಸ್ಥಳೀಯ ಬಸವೇಶ್ವರ ವೃತ್ತದ ಹತ್ತಿರದ ಬಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಶರಣ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರಾದ ಟಿ. ಬಸವರಾಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.