
ಗ್ರಾ.ಪಂ. ಜಿಪಿಟಿಎಫ್ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ ಶಿಬಿರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕೊಂಚಿಗೇರಿ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮ ಶ್ಲಾಘನೀಯ. ಇದರಿಂದ ಗ್ರಾಮೀಣ ಜನತೆಗೆ ಆರೋಗ್ಯ ಸೇವಾ ಸೌಲಭ್ಯಗಳು ಸುಲಭವಾಗಿ ಸಿಗಲು ಸಾಧ್ಯ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಳ್ಳಿ ಬಸವರಾಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಸಿರುಗುಪ್ಪ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯಿತಿ ಜಿಪಿಟಿಎಫ್ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ ಶಿಬಿರ ಗಳನ್ನು ಹಮ್ಮಿಕೊಂಡು ತರಬೇತಿ ನೀಡಲಾಯಿತು.
ತರಬೇತಿ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೊಹಮ್ಮದ್ ಕಾಸಿಂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ಹೇಮಾವತಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ಶಿಬಿರದಲ್ಲಿ ಅನಿಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಸಾರ್ವತ್ರಿಕ ಲಸಿಕೆಗಳು ಪೌಷ್ಟಿಕ ಆಹಾರ ರಕ್ತಹೀನತೆ ಕ್ಷಯರೋಗ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ ಅಧಿಕ ರಕ್ತದೊತ್ತಡ ಕ್ಯಾನ್ಸರ್ ಬಾಲ್ಯ ವಿವಾಹ ನಿಷೇಧ ಹದಿಹರೆಯದ ಆರೋಗ್ಯ ಮುಟ್ಟಿನ ನೈರ್ಮಲ್ಯ ಶುದ್ಧ ನೀರು ಸ್ವಚ್ಛ ಪರಿಸರ ಡೆಂಗ್ಯೂ ಜ್ವರ ಮಾರಕ ರೋಗಗಳ ಅರಿವು ಕುರಿತಂತೆ ಮಾಹಿತಿ ನೀಡಲಾಯಿತು.
ನಂತರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಕ್ರಿಯಾಯೋಜನೆ ರಚಿಸಲಾಯಿತು.
ಸಾಂಕೇತಿಕವಾಗಿ ಗ್ರಾಮ ಪಂಚಾಯತಿ ಸ್ವಚ್ಛತಾಗ್ರಹಿಗಳಿಗೆ ಮತ್ತು ಹಿರಿಯರಿಗೆ ಸಾಂಕೇತಿಕವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.
ತರಬೇತಿಯ ಉದ್ದೇಶ : 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಅಧಿಕ ರಕ್ತದೊತ್ತಡ ,ಕ್ಯಾನ್ಸರ್ ಹಾಗೂ ಸಾಮಾನ್ಯ ಕಾಯಿಲೆಗಳ ತಪಾಸಣೆ. ಕಿಶೋರಿಯರಿಗೆ ಮುಟ್ಟಿನ ನೈರ್ಮಲ್ಯ ಶುಚಿ ಪ್ಯಾಡುಗಳ ಬಳಕೆ ಹಾಗೂ ಸೂಕ್ತ ನಿರ್ವಹಣೆ.
ರಕ್ತ ಹೀನತೆಯ ನಿವಾರಣೆ : ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯು ಎಲ್ಲರಿಗೂ ಸಿಗುವಂತೆ ಮಾಡುವುದು. ತರಬೇತಿಯಲ್ಲಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಲೀಲಾವತಿ ಕಾರ್ಯದರ್ಶಿ ವೀರೇಶ್ , ಮತ್ತು ಸಿಬ್ಬಂದಿ ವರ್ಗ ಸಹಕಾರ ನೀಡಿದರು.
ಶಿಬಿರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮತ್ತು ಜಿಪಿಟಿಎಫ್ ಸದಸ್ಯರು ಹಾಜರಿದ್ದರು.