2

ಸರ್ಕಾರಿ ಶಾಲಾ ಕಟ್ಟಡ ಕಳಪೆ ಕಾಮಗಾರಿ ಗ್ರಾಮಸ್ಥರ ಆರೋಪ

ಕರುನಾಡ ಬೆಳಗು ಸುದ್ದಿ

* ಲಕ್ಕಿಮರದ ಮಂಜುನಾಥ

ಮರಿಯಮ್ಮನಹಳ್ಳಿ, 12- ಹೋಬಳಿ ವ್ಯಾಪ್ತಿಯ ೧೧೨ ವೆಂಕಟಪುರ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಕೋಠಡಿಯನ್ನು ಕಳಪೆಯಾಗಿ ನಿರ್ಮಿಸಿದ್ದಾರೆಂದು ಇಲ್ಲಿನ ಗ್ರಾಮಸ್ಥರು ದೂರಿದ್ದಾರೆ.

೧೧೨ ವೆಂಕಟಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು. ಈ ಶಾಲೆಗೆ” ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ” ೧೬ಲಕ್ಷದ ಒಂದು ಕೊಠಡಿ ಮಂಜೂರಾಗಿದ್ದು ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರಾರಂಭದಿAದಲೇ ಕಟ್ಟಡಕ್ಕೆ ನೀರು ಹಾಕದೆ ಕಾಮಗಾರಿ ಮಾಡಿದ್ದು ಕಳಪೆಯಾಗಿದೆ ಎಂದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಪ ಏನು : ಶಾಲಾ ಕೊಠಡಿ ಮಂಜೂರಾಗಿ ನಿರ್ಮಿಸಿರುವ ಕಟ್ಟಡಗಳಿಗೆ, ನಿರ್ಮಾಣ ಹಂತದಿAದ ಸರಿ ಸುಮಾರು ಒಂದು ವರೆ ತಿಂಗಳಾದರೂ ಸರಿಯಾಗಿ ನೀರು ಹಾಕಿಲ್ಲ. ಸುಮಾರು ೬೦ವರ್ಷದ ವೃದ್ಧನನ್ನು ನೀರು ಹಾಕಲು ಬಿಟ್ಟಿದ್ದಾರೆ. ವಯಸ್ಸಾದ ಅಜ್ಜ ಬಿಂದಿಗೆಯಲ್ಲಿ ನೀರು ತುಂಬಿಕೊAಡು ಕಟ್ಟಡದ ಮೇಲಕ್ಕೆ ಅತ್ತಿ ನೀರನ್ನು ಹಾಕಲು ಹೇಗೆ ಸಾಧ್ಯ.ಒಳಗಡೆ ಹಾಕಬಹುದು ಆದರೆ ಹಿಂದಿನ ಮತ್ತು ಹೊರಭಾಗಗಳಲ್ಲಿ ನೀರು ಹಾಕಲು ಸಾಧ್ಯವೇ ಇಲ್ಲ. ಅಷ್ಟು ಎತ್ತರಕ್ಕೆ ಪೈಪ್ ಮೂಲಕವೇ ಹಾಕಬೇಕು. ಈ ಸಮಯದಲ್ಲಿ ಅಕಸ್ಮಾತ್ ಆತನಿಗೆ ಮೆಟ್ಟಿಲು ಮತ್ತು ಏಣಿ ಹತ್ತುವಾಗ ಇಳಿಯುವಾಗ ಆಯಾತಪ್ಪಿ ಅಪಾಯವಾದರೆ ಹೊಣೆಯಾರು.

ಕಟ್ಟಡಕ್ಕೆ ಟಾಪ್, ಕಾಂಕ್ರೀಟ್ ನ್ನು ಶನಿವಾರ ೨.೧೧.೨೦೨೪ರಂದು ಮುಂಜಾನೆಯಿAದ ಶುರುಮಾಡಿ ೧:೦೦ಘಂಟೆ ಸುಮಾರಿಗೆ ಕೆಲಸ ಮುಗಿಸಿದರು. ಭಾನುವಾರ ೩.೧೧.೨೦೨೪ರಂದು ಕ್ಯೂರಿಂಗ್ ಮಾಡಲು ನೀರು ನಿಲ್ಲಿಸುವುದಕ್ಕಾಗಿ ಮಡಿ ಕಟ್ಟಿದರು. ಸೋಮವಾರ ಮತ್ತು ಮಂಗಳವಾರ ನೀರು ಹಾಕಬೇಕಿತ್ತು ಆದರೆ ಎರೆಡು ದಿನ ನೀರು ಹಾಕಿಲ್ಲ. ನೀರಿಲ್ಲದೇ ಟಾಪ್ ಹಾಕಿರುವ ಕಾಂಕ್ರಿಟ್ ಹೇಗೆ ಸೆಟ್ ಆಗುತ್ತದೆ. ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ.

ಸಾರ್ವಜನಿಕ ಶಾಲೆಯನ್ನು ಈರೀತಿಯಾಗಿ ಬೇಕಾಬಿಟ್ಟಿ ಕಟ್ಟಿದರೆ ಹೇಗೆ. ಸರಿಯಾಗಿ ಕ್ಯೂರಿಂಗ್ ಮಾಡಿ ಕಟ್ಟಡ ಕಟ್ಟಬೇಕು ಕ್ಯೂರಿಂಗ್ ಮಾಡದೇ ಮಾಡಿದರೆ ೫ ಅಥವಾ ೧೦ವರ್ಷಕ್ಕೆ ಬಿದ್ದು ಹೋಗುತ್ತವೆ. ಮಾಡಿ ಪ್ರಯೋಜನವೇನು. ನೂರಾರು ಮಕ್ಕಳು ಕಲಿಯಲು ಬರುತ್ತಾರೆ ಒಂದು ವೇಳೆ ಮೇಲೆ ಬಿದ್ದರೆ ಗತಿ ಏನು. ಈಗ ಮಾಡಿರುವ ಮೆಟ್ಟಿಲುಗಳು ಕಾಲಿನಿಂದ ಒದ್ದರೆ ಕಿತ್ತೋಗಿವೆ. ಇದಕ್ಕೆ ಕಾರಣ ನೀರು ಹಾಕದೆ ಕ್ಯೂರಿಂಗ್ ಮಾಡದಿರುವುದು. ಇಲ್ಲಿ ಪಂಪ್ಸೆಟ್ ನೀರಿದೆ ಅದನ್ನು ಬಳಕೆಮಾಡಿಕೊಂಡಿಲ್ಲ. ಇಂತಹ ದೊಡ್ಡ ಕಟ್ಟಡಕ್ಕೆ ಕೈಲಿಂದ ನೀರು ಉಗ್ಗಿದರೆ ಹೇಗೆ ಕ್ಯೂರಿಂಗ್ ಆಗುತ್ತದೆ.

ಇದುವರೆಗೂ ಇಂಜಿನಿಯರ್ ಮತ್ತು ಕಾಂಟ್ರಾಕ್ಟರ್ ಸ್ಥಳಕ್ಕೆ ಬಂದೇ ಇಲ್ಲ ನಾವೂ ನೋಡಿಲ್ಲ. ಇದುವರೆಗೂ ಮೇಸ್ತ್ರಿಯಿಂದಲೇ ಕೆಲಸ ನಡೆಸಿದ್ದಾರೆ. ಇಂಜಿನಿಯರ್ ಆದವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಗಮನಿಸುತ್ತಿರಬೇಕು. ಇಲ್ಲಿ ಇವರು ಮಾಡಿದ್ದೇ ಕೊನೇ ಎಂಬ0ತಾಗಿದೆ ಇಂಜಿನಿಯರ್ ಕೂಡಲೇ ಸ್ಥಳಕ್ಕೆ ಬಂದು ಕ್ವಾಲಿಟಿ ಪರೀಕ್ಷಿಸಬೇಕು ಎಂದು ಗ್ರಾಮದ ಮುಖಂಡ ಬಸವರಾಜ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಗೋಸಿ ಗಾಳೆಪ್ಪ ದೂರಿದರು. ದ್ಯಾಮಪ್ಪ, ರಾಮಣ್ಣ ಹನುಮಂತಪ್ಪ ಇದ್ದರು.

ಶಾಲಾ ಕಟ್ಟಡಗಳನ್ನು ಈ ರೀತಿಯಾಗಿ ನಿರ್ಮಿಸಿದರೆ ೧೦ವರ್ಷ ಬಾಳಿಕೆ ಬರುವುದಿಲ್ಲ, ಬಹುಬೇಗ ಬಿದ್ದು ಹೋಗುತ್ತವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಮತ್ತೆ ಶಾಲೆಗಳಿಗೆ ಕಟ್ಟಡ ಕೊಡಲು ತುಂಬಾ ವರ್ಷಗಳೇ ಹಿಡಿಯುತ್ತವೆ. ಗುತ್ತಿಗೆದಾರರು ನಿಯಮನುಸಾರ ಕಟ್ಟಡಗಳನ್ನು ನಿರ್ಮಿಸಬೇಕು.

Leave a Reply

Your email address will not be published. Required fields are marked *

error: Content is protected !!