
ಗ್ರಾಮಸ್ಥರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೆರೆಗಳಲ್ಲಿ ಹಾಕಬಾರದದು ಕರೆಗಳ ಸಂರಕ್ಷಣೆ ನಮ್ಮದು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 8- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಿಂದ ಕೆರೆಗಳು ಅಭಿವೃದ್ಧಿಯಾಗಿದರೆ ಕೆರಗಳ ಸುತ್ತ ಮುತ್ತಲಿನ ರೈತರ ಪಂಪ್ ಸೆಟ್ ಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಯಾಗುವದಿಲ್ಲ ಕೆರಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗ್ರಾಮಸ್ಥರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರ ಮೂಲಕ ಕೆರಗಳ ಸಂರಕ್ಷಣೆ ನಿಮ್ಮದು. . ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ ಚಂದ್ರಶೇಖರ ಹೇಳಿದರು.
ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆಗೆ ಭಾಗಿನ ಅರ್ಪಿಸಿ ಮತ್ತು ಕೆರೆಯ ನಾಮ ಫಲಕ ಉಧ್ಘಾಟಿಸಿ ಮಾತನಾಡಿದ ಅವರು ಯೋಜನೆಯಡಿ ಕೆರೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅಂದಾಜು 6 ಲಕ್ಷ ರೂಪಾಯಿ ಗ್ರಾಮಸ್ಥರ ವಂತಿಗೆ ಹಣ 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕೆರೆ ಹೂಳೆತ್ತಲಾಗಿದೆ ಆಧುನಿಕತೆಗೆ ಸಿಲುಕಿ ಕೆರೆಗಳು ಮಾಯವಾಗುತ್ತಿವೆ.
ನೀರಿನ ಉಳಿವಿಗಾಗಿ ಕೆರೆಗಳ ಉಳಿವು ಅತ್ಯಗತ್ಯವಾಗಿದೆ ಗ್ರಾಮಸ್ಥರು ಕೆರೆ ಒತ್ತುವರಿ ಮಾಡುವದಾಗಲಿ ಗ್ರಾಮದ ಕಸ ಕಡ್ಡಿ ತ್ಯಾಜ್ಯಗಳನ್ನು ಕೆರೆಯಲ್ಲಿ ಹಾಕಬಾರದು ಗ್ರಾಮಸ್ಥರು ಕೆರೆಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಪ್ರವಾಸಿಗರ ತಾಣವಾಗಿ ನಿರ್ಮಾಣ ಮಾಡಬೇಕು ಕೆರೆಯ ಸುತ್ತಲು ಸಸಿಗಳನ್ನು ನೆಟ್ಟು ಪೋಷಿಸಿ ಬೆಳಸುವ ಮೂಲಕ ಪರಿಸರ ಸ್ನೇಹಿ ಕೆರೆಯನ್ನಾಗಿ ಮಾಡಬೇಕು ಗ್ರಾಮದಲ್ಲಿ ಕೆರೆ ಸಮಿತಿಯನ್ನು ರಚಿಸಿ ಸಾರ್ವಜನಿಕರ ಉಪಯೋಗಕ್ಕೆ ಹಸ್ತಾಂತರಿಸಲಾಗಿದೆ ಕೆರೆ ಅಭಿವೃದ್ಧಿಗೆ ಜನರು ಕಾಳಜಿ ವಹಿಸ ಬೇಕೆಂದರು.ಗ್ರಾಮದ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪತ್ತಾರ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ್ಳಿಯ ಶಿವಾನಂದ ಮಠದ ಪಿಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಯಮನಪ್ಪ ಮಾಳಿ, ತಾಲೂಕ ಯೋಜನಾಧಿಕಾರಿ ಸತೀಶ ಗಾಂವಕರ, ತಾಲೂಕ ಕೃಷಿ ಮೇಲ್ವೀಚಾರಕ ಪ್ರಸನ್ ಕುಮಾರ, ಕೆರೆ ಇಂಜನೀಯರ್ ಸತೀಶ, ಸೇವಾ ಪ್ರತಿನಿಧಿ ಹೊನ್ನಮ್ಮ, ಗ್ರಾಮ ಪಂಚಾಯತ ಸದಸ್ಯ ಸೋಮಲಿಂಗಪ್ಪ ಕುರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ ಮಾಲಿ ಪಾಟೀಲ್, ಮುಖಂಡರಾದ ವೀರನಗೌಡ ಪೋಲೀಸ್ ಪಾಟೀಲ್, ಗುರನಾಥ ಗಡ್ಡದ, ಬಾಲಾಜಿ ಬಡಿಗೇರ, ಉಮೇಶ ಕಂಬಳಿ ದೇವಪ್ಪ ಹೊಸೂರು, ಶರಣಪ್ಪ ಮೇಣೆದಾಳ, ಶರಣಪ್ಪ ಪಟ್ಟೇದ, ಈರಪ್ಪ ಮುಂಡರಗಿ, ಯಮನೂರಪ್ಪ ಕಾಗಿ, ಯಮನೂರಪ್ಪ ಹೊಸ್ಮನಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.