KB

ವಿಶ್ರೀಕೃವಿವಿ ಐತಿಹಾಸಿಕ ಸಾಧನೆ : 3 ದಿನಕ್ಕೆ ಪರೀಕ್ಷಾ ಫಲಿತಾಂಶ ಪ್ರಕಟ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 9- ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳ ಬಿಸಿಎ ಪದವಿಯ ೬ನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನ ಮುಗಿದ ಕೇವಲ ೩ ದಿನಕ್ಕೆ ಯುಯುಸಿಎಂಎಸ್ ತಂತ್ರಾಂಶ ಸಹಾಯದ ಮೂಲಕ ವಿಶ್ವವಿದ್ಯಾಲಯವು ಫಲಿತಾಂಶವನ್ನು ಪ್ರಕಟಿಸಿದೆ ಇದು ವಿವಿ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಎಂದು ಕುಲಪತಿಗಳಾದ ಮುನಿರಾಜು ತಿಳಿಸಿದ್ದಾರೆ.

ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಬಿಸಿಎ ಪದವಿ ಸುಮಾರು ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ತೆರಳಲು ಇದರಿಂದ ಅನುಕೂಲವಾಗಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಮುಗಿದ ಬೆರಳೆಣಿಕೆ ದಿನದಲ್ಲಿ ಫಲಿತಾಂಶ ಪ್ರಕಟಿಸಿರುವುದು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿದೆ.

ಪರೀಕ್ಷಾ ವಿಭಾಗದಲ್ಲಿ ಕ್ಷಿಪ್ರ ಬದಲಾವಣೆ ತಂದು ಅನೇಕ ವಿನೂತನ ಕ್ರಮಗಳನ್ನು ಅನುಸರಿಸಲಾಗಿದೆ. ಇದರ ಭಾಗವಾಗಿ ಬಿಸಿಎ ಫಲಿತಾಂಶ ಮೂರು ದಿನಕ್ಕೆ ಪ್ರಕಟಿಸಿರುವುದು ದಾಖಲೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪರೀಕ್ಷಾಂಗ ವಿಭಾಗದಲ್ಲಿ ಮತ್ತಷ್ಟು ಪ್ರಗತಿಪರ ಬದಲಾವಣೆ ತರುವ ದೃಢವಿಶ್ವಾಸವನ್ನು ಕುಲಪತಿಗಳು ವ್ಯಕ್ತಪಡಿಸಿದ್ದಾರೆ. ಕುಲಸಚಿವರಾದ ರುದ್ರೇಶ್ ಎಸ್ ಎನ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ್ ಅವರುಗಳು ಪರೀಕ್ಷಾ ಫಲಿತಾಂಶ ಕಾರ್ಯಕ್ಕೆ ಸಹಕರಿಸಿದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ-ಕರ್ನಾಟಕ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಶೀಘ್ರ ಫಲಿತಾಂಶ ಪ್ರಕಟಿಸುವ ಕ್ರಮಕ್ಕೆ ಒತ್ತು ನೀಡಲಾಗಿದೆ.

ಪ್ರೊ. ಎಂ ಮುನಿರಾಜು,

ಮಾನ್ಯ ಕುಲಪತಿಗಳು, ವಿಶ್ರೀಕೃವಿವಿ, ಬಳ್ಳಾರಿ.

Leave a Reply

Your email address will not be published. Required fields are marked *

error: Content is protected !!