
ಸಿರಗುಪ್ಪ : 6 ರಂದು ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 5- ಕೇಂದ್ರ ಸರ್ಕಾರದ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ಅ. 6 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬಳ್ಳಾರಿ ಮಹಾನಗರದ ನೂತನ ಜಿಲ್ಲಾ ಆಡಳಿತ ಸಭಾಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ರೈಲ್ವೆ ಕಾಮಗಾರಿಗಳಿಗೆ ಸಂಬAಧಿಸಿದAತೆ ಸಭೆ ನಡೆಸುವರು ಮಧ್ಯಾಹ್ನ ೨ ಗಂಟೆಗೆ ಬಳ್ಳಾರಿಯಿಂದ ಹೊರಟು ಮಧ್ಯಾಹ್ನ ೩:೦೦ಗೆ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ನಾಗನಾಥೇಶ್ವರ ದೇವಾಲಯ ಆವರಣದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಆಧರಿತ ಸಾಕ್ಷ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
೩:೪೫ ನಿಮಿಷಕ್ಕೆ ಸಿರುಗುಪ್ಪ ಸಿರಿಗೇರಿ ಗ್ರಾಮದಿಂದ ರಾಯಚೂರು ಜಿಲ್ಲೆ ಸಿಂಧನೂರಿಗೆ ಪ್ರಯಾಣ ಬೆಳೆಸುವರು ಸಂಜೆ ೭:೦೦ಗೆ ಸಿಂಧನೂರಿನಿAದ ಮರಳಿ, ಬಳ್ಳಾರಿಗೆ ಆಗಮಿಸುವರು ರಾತ್ರಿ ೧೦:೫೫ ಗಂಟೆಗೆ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು ಸಚಿವರ ಸಹಾಯಕ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.