
ಸಂಧಿವಾತಕ್ಕೆ ವಾಕ್ ಥಾನ ಜಾಗೃತಿ ನಡಿಗೆ
ಈ ಭಾಗದ ಜನರ ಸೇವೆ ಮಾಡುವುದು ನನಗೆ ಒದಗಿದ ಸೌಭಾಗ್ಯ : ಡಾ. ಕ್ಯಾವಟರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಂಧಿವಾತಕ್ಕೆ ಒಳಗಾದ ವ್ಯಕ್ತಿಗಳಿಂದ “ವಾಕ್ ಥಾನ” ಕೆಎಸ್ ಆಸ್ಪತ್ರೆಯಿಂದ ಹಮ್ಮಿಕೊಳ್ಳಲಾಗಿತ್ತು.
ಸಂಧಿವಾತ ದಿನದ ಪ್ರಯುಕ್ತ ಕೊಪ್ಪಳದ ಕೆಎಸ್ ಆಸ್ಪತ್ರೆಯ ವತಿಯಿಂದ “ವಾಕ್ ಥಾನ” ಸಂಧಿವಾತದಿ0ದ ಗುಣಮುಖವಾದ ವ್ಯಕ್ತಿಗಳಿಂದ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದಿಂದ, ಅಶೋಕ್ ಸರ್ಕಲ್, ಬಸವೇಶ್ವರ ಸರ್ಕಲ್ (ಗಂಜ ಸರ್ಕಲ್) ಮೂಲಕ ಕೆಎಸ್ ಆಸ್ಪತ್ರೆಯವರೆಗೆ ಹಮ್ಮಿಕೊಳ್ಳಲಾಗಿತ್ತು. ನಡಿಗೆ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಅವರ ಚಿಕಿತ್ಸೆಯಿಂದ ನೂರಕ್ಕೂ ಹೆಚ್ಚು ಗುಣಮುಖವಾದ ವ್ಯಕ್ತಿಗಳು ಒಂದುವರೆ ಕಿಲೋಮೀಟರ್ ನಡಿಗೆಯನ್ನು ಮಾಡಿ ಸಂಧಿವಾತ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ವಾಕ್ ಥಾನ್ ನಲ್ಲಿ ಕೊಪ್ಪಳದ ಹಿರಿಯ ನಾಗರಿಕರು, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೊಪ್ಪಳ ನಗರದ ಖ್ಯಾತ ವೈದ್ಯರು, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 1,500ಕ್ಕೂ ಹೆಚ್ಚು “ವಾಕ್ ಥಾನ್” ಜಾತದಲ್ಲಿ ಪಾಲ್ಗೊಂಡರು.
ಕೊಪ್ಪಳ ನಗರದ ಕೇಂದ್ರದ ಬಸ್ ನಿಲ್ದಾಣದಲ್ಲಿ ಶ್ರೀ ವೀರಯ್ಯಸ್ವಾಮಿ ಗಂಗಾವತಿ ಬಾವುಟ ತೋರಿಸುವುದರ ಮೂಲಕ ನಡಿಗೆಗೆ ಚಾಲನೆ ನೀಡಿದರು.
1,500 ಜನರನ್ನ ಒಳಗೊಂಡ ನಡಿಗೆ ಕಾರ್ಯಕ್ರಮ ಕೆ ಎಸ್ ಆಸ್ಪತ್ರೆಯಲ್ಲಿ ಪೂರ್ಣಗೊಂಡು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಧಿವಾತದಿ0ದ ಗುಣಮುಖವಾದ ಹಿರಿಯ ವೀರಯ್ಯಸ್ವಾಮಿ ಗಂಗಾವತಿ, ಕಾರ್ಯಕ್ರಮಕ್ಕೆ ಸಹಕರಿಸಿದ ವೀರೇಶ್ ಮುಖ್ಯಸ್ಥರು ಎಂಎಸ್‌ಪಿಎಲ್ ಬಲ್ದೊಟ ಕೊಪ್ಪಳ, ಉದ್ಯಮಿ ಪ್ರಭು ಹೆಬ್ಬಾಳ್, ಹಿರಿಯ ವಕೀಲ ಭೂಸನೂರುಮಠ, ನರರೋಗ ತಜ್ಞ ಡಾ.ಕೃಷ್ಣಮೂರ್ತಿ, ಡಾ.ಶಿವನಗೌಡ ಪಾಟೀಲ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಸವರಾಜ್ ಕ್ಯಾವಟರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವಾರು ಗುಣಮುಖವಾದ ರೋಗಿಗಳು ಮಾತನಾಡಿ, ಸಂಧಿವಾತ ರೋಗ ಮನುಷ್ಯನ ದೈನಂದಿಕ ಚಟುವಟಿಕೆಗಳಿಗೆ ತೊಂದರೆ ಹೇಗೆ ಕೊಡುತ್ತದೆ, ಅದರ ನೋವನ್ನು ತಡೆದುಕೊಳ್ಳುವುದು ಹೇಗೆ, ಡಾ.ಬಸವರಾಜ್ ಚಿಕಿತ್ಸೆ ಕಾರಣದಿಂದ ಉತ್ತರ ಕರ್ನಾಟಕದಲ್ಲಿಯೇ ಅದು ಕೊಪ್ಪಳ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಕೆಎಸ್ ಆಸ್ಪತ್ರೆಯಲ್ಲಿ ಸಂಧಿವಾತ ರೋಗಿಗಳಿಗೆ ಸಂಪೂರ್ಣ ಗುಣಮುಖವಾಗುವಂತೆ ದೇವರ ಸ್ವರೂಪದಲ್ಲಿ ನಮಗೆ ಚಿಕಿತ್ಸೆಯನ್ನು ನೀಡಿದರು ಎಂದು ಹಲವಾರು ರೋಗಿಗಳು ಭಾವನಾತ್ಮಕವಾಗಿ ವಿಷಯಗಳನ್ನು ಹಂಚಿಕೊ0ಡರು.
ಅಧ್ಯಕ್ಷತೆ ವಹಿಸಿದ ಕೆಎಸ್ ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ್ ಕ್ಯಾವಟರ ಮಾತನಾಡಿ, ನಾನು ಬೆಂಗಳೂರಿನಲ್ಲಿ ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವಾಗ ಸಂಧಿವಾತ ರೋಗಕ್ಕೆ ಒಳಗಾದಂತ ನೋವನ್ನ ತಾಳಲಾರದಿರುವಂತ ಹಲವಾರು ವ್ಯಕ್ತಿಗಳು ನನ್ನನ್ನು ಸಂಪರ್ಕಿಸುತ್ತಿದ್ದರು. ಅವರಿಗೆ ಬೆಂಗಳೂರಿಗೆ ಬರುವಂತೆ ತಿಳಿಸಿ ಬೆಂಗಳೂರಿನಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದೆ. ನಮ್ಮ ಭಾಗದ ಜನರಿಗೆ ಅನುಕೂಲವಾಗಲೆಂದು ಕೆಎಸ್ ಆಸ್ಪತ್ರೆಯನ್ನು ಪ್ರಾರಂಭಿಸಿ ಸಾವಿರಾರು ರೋಗಿಗಳಿಗೆ ಕಡಿಮೆ ಖರ್ಚಿನಲ್ಲಿ, ಬೇಗನೆ ಗುಣಮುಖವಾಗುವ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ರಹಿತವಾಗಿ ರೋಗಿಗಳು ಗುಣಮುಖವಾಗುವಂತೆ ಮಾಡಿದ್ದೇನೆ. ಇದೊಂದು ಸವಾಲಿನ ಕೆಲಸವಾಗಿದ್ದರೂ ಕೂಡ ಈ ಭಾಗದ ಜನರ ಸೇವೆ ಮಾಡುವುದು ನನಗೆ ಒದಗಿದ ಸೌಭಾಗ್ಯ ಎಂದು ಭಾವಿಸಿ ಚಿಕಿತ್ಸೆಯನ್ನು ನೀಡುತ್ತಿದ್ದೇನೆ. ನನ್ನ ಚಿಕಿತ್ಸೆಯ ಕಾರಣದಿಂದ ಇಷ್ಟೆಲ್ಲಾ ರೋಗಿಗಳು ಗುಣಮುಖರಾದರು ಎಂಬ ಸಂತೃಪ್ತಿಯ ಭಾವ ನನ್ನಲ್ಲಿ ಮೂಡಿದೆ ಮುಂದಿನ ಚಿಕಿತ್ಸೆಗೆ ಮತ್ತೊಂದು ಹೊಸ ಪ್ರಯತ್ನಕ್ಕೆ ಉತ್ಸಾಹವನ್ನು ತರಿಸಿದೆ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು.
ನಡಿಗೆ ಜಾತಾದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಶ್ರೀ ಮರಿಶಾಂತವೀರ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳು, ಶ್ರೀ ಗವಿಸಿದ್ದೇಶ್ವರ ನರ್ಸಿಂಗ್ ಆಫ್ ಕಾಲೇಜಿನ ವಿದ್ಯಾರ್ಥಿಗಳು, ಶ್ರೀಮತಿ ಶಾರದಮ್ಮ ಕೊತ್ಬಾಳ ಕಾಲೇಜಿನ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳು, ನ್ಯಾಷನಲ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ವಿದ್ಯಾರ್ಥಿಗಳು, ಚಂದ್ರಮುಖಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಫೀನಿಕ್ಸ್ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರುಗಳು, ಎನ್‌ಎಸ್‌ಎಸ್ ಅಧಿಕಾರಿಗಳು, ಕಾಲೇಜಿನ ಸಂಯೋಜಕರು, ಬಳ್ದೋಟ ಸಂಸ್ಥೆಯ ಸಿಬ್ಬಂದಿಗಳು, ಎಂಎಸ್‌ಪಿಎಲ್ ಸಿಬ್ಬಂದಿಗಳು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು, ಐಆರ್‌ಬಿ ಮುನಿರಾಬಾದಿನ ಪೊಲೀಸ್ ಸಿಬ್ಬಂದಿಗಳು, ಕೆಎಸ್ ಕಾಲೇಜ್ ಆಫ್ ನರ್ಸಿಂಗನ ವಿದ್ಯಾರ್ಥಿಗಳು, ಕೆಎಸ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.