
ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನದಿಗೆ ನೀರು ರೈತರಲ್ಲಿ ಹರುಷ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ರೈತರು ತುಂಗಭದ್ರಾ ಜಲಾಶಯ ಭರ್ತಿಯಿಂದ ಖುಷಿಯಾಗಿದ್ದಾರೆ ನದಿ ಕಾಲುವೆಗಳಿಗೆ ನೀರು ಹರಿಯುತ್ತಿದ್ದು 15 ದಿನಗಳಿಂದ ಸಿರುಗುಪ್ಪ ತಾಲೂಕಿನಲ್ಲಿ ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.
ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದು ನಂತರ ಕೆಲ ದಿನ ಮಾಯವಾಗಿದ್ದರಿಂದ ರೈತರು ಆತಂಕಗೊಂಡಿದ್ದರು ಮಳೆ ಡ್ಯಾಮ್ ತುಂಬುವ ಬಗ್ಗೆ ಭರವಸೆ ಕಳೆದುಕೊಂಡಿದ್ದರು ಆದರೆ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯ ಭರ್ತಿಯಾಗಿದ್ದು ರೈತರ ಮೊಗದಲ್ಲಿ ನಗು ಮೂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ ನದಿ ಕಾಲುವೆಗಳಿಗೆ ನೀರು ಹರಿಸಿರುವುದು ಮತ್ತಷ್ಟು ಖುಷಿಗೆ ಕಾರಣವಾಗಿದೆ ಹೀಗಾಗಿ ತುಂಗಭದ್ರ ನದಿ ಹಾಗೂ ಬೋರ್ ವೆಲ್ ನೀರನ್ನು ಅವಲಂಬಿಸಿರುವ ಸಿರುಗುಪ್ಪ ತಾಲೂಕಿನ ಮಣ್ಣೂರು ಎಂ.ಸೂಗೂರು, ಮಣ್ಣೂರು ಕ್ಯಾಂಪ್, ರುದ್ರಪಾದ, ಮುದ್ದಟನೂರು, ನಡವಿ, ಉಡೆಗೋಳ, ನಿಟ್ಟೂರು, ಹೆರಕಲ್ಲು, ಕೆಂಚನ ಗುಡ್ಡ ತಾಂಡಾ ವಿವಿಧ ಹಳ್ಳಿಗಳಲ್ಲಿ ಸೇರಿ ವಿವಿಧ ಕೃಷಿ ಚಟುವಟಿಕೆ ಗರಿ ಗೆದರಿದೆ ತೆಕ್ಕಲಕೋಟೆ ಹೋಬಳಿಯಲ್ಲಿ ಕಾಲುವೆ ನೀರು ನಂಬಿ 3500 ಹಾಗೂ ನದಿ ದಂಡೆ ವ್ಯಾಪ್ತಿಯಲ್ಲಿ 8500 ಹೆಕ್ಟೇರ್ ನಲ್ಲಿ ರೈತರಿಂದ ಭತ್ತಾನಾಟಿ ಆರಂಭವಾಗಿದೆ.
ಬೇಸಿಗೆ ಬೆಳೆ ಬೆಳೆಯದ ರೈತರು ಈ ಬಾರಿ ನೀರಾವರಿ ಪ್ರದೇಶಗಳಲ್ಲಿ ಭತ್ತ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ ಆದರೆ ಎಲ್ಲರಿಗೂ ಭತ್ತದ ಸಸಿಗಳು ಸರಿಯಾಗಿ ದೊರೆಯುತ್ತಿಲ್ಲ ಕೆಲ ಕಾಲುವೆ ಭಾಗದ ರೈತರು ಬೋರ್ ವೆಲ್ ನೀರಿನಿಂದ ಸಸಿ ಮಡಿ ಹಾಕಿದ್ದು ಇನ್ನೂ ಕೆಲವರು ನದಿಗೆ ನೀರು ಬಂದ ಮೇಲೆ ಬೇರೆ ಕಡೆಯಿಂದ ಎಂದು ನಾಟಿ ಮಾಡಿದರೆ ಆಯ್ತು ಎಂದು ಕೊಂಡವರಿಗೆ ಇದೀಗ ಸಸಿಗಳು ಸಿಗುತ್ತಿಲ್ಲ ಸಿರುಗುಪ್ಪ ತಾಲೂಕಿನ ಕೆಲಒಡೆ ಭತ್ತ ನಾಟಿ ಆರಂಭವಾಗಿದೆ ಆದರೆ ನಾಟಿ ಮಾಡಲು ಕೂಲಿಕಾರರು ಸಿಗದೇ ರೈತರು ಪರದಾಡುತ್ತಿದ್ದಾರೆ.
ಒಂದೇ ಸಲ ನಾಟಿ ಕಾರ್ಯ ಕೈಗೊಂಡಿರುವುದರಿಂದ ಸ್ಥಳೀಯ ಕಾರ್ಮಿಕರು ಸಿಗುತ್ತಿಲ್ಲ ಹೀಗಾಗಿ ರೈತರು ಬೇರೆ ಬೇರೆ ಗ್ರಾಮದ ಕಾರ್ಮಿಕರನ್ನು ಕರೆತರಬೇಕಾಗಿದೆ ಈ ಮೊದಲು 250 ರೂಪಾಯಿ ಕೂಲಿ ನೀಡಲಾಗುತ್ತಿತ್ತು ಇದೀಗ 300 ರೂಪಾಯಿ ಕೊಡಬೇಕಾಗಿದೆ ಪ್ರತಿ ಎಕರೆಗೆ 3700 ಕೊಟ್ಟು ಅದರೊಂದಿಗೆ ಆಟೋ ಅಥವಾ ಟ್ರ್ಯಾಕ್ಟರ್ ಬಾಡಿಗೆ ಸಹ ನೀಡಿ ಕಾರ್ಮಿಕರನ್ನು ಕರೆ ತರಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ ಎಂದು ರೈತರು ಹೇಳುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿಯವರು ತಿಳಿಸಿದ್ದಾರೆ.