5

ಅ0ಬೇಡ್ಕರ್ ಕಾಲೋನಿ ಅಭಿವೃದ್ಧಿಯಿಂದ ಮರೀಚಿಕೆ
ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು ಸ್ಥಳೀಯರ ಆಕ್ರೋಶ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 5- ಹೋಬಳಿಯ ಜಿ.ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗರಗ ಗ್ರಾಮದಲ್ಲಿ ಎಸ್ಸಿ ಕಾಲೋನಿಗಳನ್ನು ಅಭಿವೃದ್ಧಿಯಿಂದ ಕಡೆಗಣಿಸಲಾಗಿದೆ ಹಾಗಾಗಿ ಪ್ರತಿ ಸಲ ಮಳೆಗಾಲ ಬಂದಾಗ ಇದೇ ಪರಿಸ್ಥಿತಿ ಧರಿಸುತಿದ್ದೇವೆ ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತೀ ವರ್ಷ ಮಳೆ ಶುರುವಾಯಿತು ಎಂದರೆ ನೀರಿನ ಹರಿವು ವಿಪರೀತವಾಗುತ್ತದೆ ಕಾಲೋನಿಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇಲೆ ನೀರು ಹರಿದು ಮೆನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಗರಗ ಗ್ರಾಮದಲ್ಲಿ ಎಸ್ ಸ್ಸಿ ಜನಾಂಗದ ೫೦ ಮನೆಗಳಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಚರಂಡಿ ಕಳೆದ ೧೦ವರ್ಷಗಳಿಂದ ಮಾಡಿಸದೆ ಇರುವುದರಿಂದ ಪ್ರತೀ ವರ್ಷ ಇಂತಹ ಅನಾಹುತಗಳು ಮರುಕಳಿಸುತ್ತಿವೆ. ಸ್ಥಳಿಯರು ಅಧಿಕಾರಿಗಳಿಗೆ ಹಲವು ಬಾರಿ ಮೌಕಿಕವಾಗಿ, ಪತ್ರದ ಮುಖಾಂತರ ಮನವಿ ಮಾಡಿದರೂ ಮಾಡಿಸುತ್ತೇವೆಂದು ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ.

ಜನಪ್ರತಿನಿಧಿಗಳೂ ಇತ್ತ ಗಮನ ಹರಿಸುತ್ತಿಲ್ಲ. ಚುನಾವಣೆಗಳು ಬಂದಾಗ ಮಾತ್ರ ನಾವು ನೆನೆಪಾಗುತ್ತೇವೆ. ಈ ಭಾರಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕೈ ಕಾಲು ಮುಗಿದು ಓಟು ಹಾಕಿಸಿಕೊಳ್ಳುತ್ತಾರೆ. ನಂತರ ನಮ್ಮ ಗೋಳು ಕೇಳೋರಿರುವುದಿಲ್ಲ, ಈ ಕಡೆ ಇಣಿಕಿಯೂ ನೋಡೋದಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಹೊರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳಿಯರು ಪತ್ರಿಕೆಗೆ ತಿಳಿಸಿದರು. ಇನ್ನು ಮುಂದೆ ಯಾದರು ಅಧಿಕಾರಿಗಳು ಈ ಕಡೆ ಗಮನ ಹರಿಸಿ ಅಭಿವೃದ್ಧಿಗೆ ಮುಂದಾಗಬೇಕೆ0ದರು.

Leave a Reply

Your email address will not be published. Required fields are marked *

error: Content is protected !!