
ನಾವು ನೀವು ದೇಶದಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದು ಸೈನಿಕರಿಂದ : ಮೇಯರ್ ಮುಲ್ಲಂಗಿ ನಂದೀಶ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ದೇಶಕ್ಕೆ ಸೈನಿಕರ ಕೊಡುಗೆ ಅಪಾರವಾದದ್ದು ಅವರಿಂದಲೇ ನಾವು ನೀವು ದೇಶದ ಒಳಗಡೆ ಸುರಕ್ಷಿತವಾಗಿರಲು ಸಾಧ್ಯವಾಗಿದೆ, ಚಳಿ ಮಳೆ ಗಾಳಿಯನ್ನು ಲೆಕ್ಕಿಸದೆ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ ದೇಶದ ಗಡಿಯಲ್ಲಿ ಉಗ್ರಗಾಮಿಗಳ ಜೊತೆ ಹೋರಾಟ ಮಾಡಿ ವೀರಮರಣವನ್ನು ಹೊಂದಿದ್ದಾರೆ ಇದರಿಂದಾಗಿ ಸೈನಿಕರು ದೇಶಕ್ಕಾಗಿ ತಮ್ಮ ಕುಟುಂಬವನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ ಸೈನಿಕರ ಕುಟುಂಬದವರು ಯಾರು ಅನಾಥರಲ್ಲ ಅವರ ಜೊತೆ ದೇಶದ ಇದೆ ಯಾವುದೇ ಕಾರಣಕ್ಕೂ ಅವರು ಎದೆಗುಂದಬಾರದು ಎಂದು ಮೇಯರ್ ಮುಲ್ಲಂಗಿ ನಂದೀಶ್ ತಿಳಿಸಿದರು.
ಅವರು ಇಂದು ನಗರದ ಸುಧಾ ಕ್ರಾಸ್ ನಲ್ಲಿ ಇರುವ ಹುತಾತ್ಮ ಯೋಧರ ಯುದ್ಧ ಸ್ಮಾರಕದಲ್ಲಿ ಮಾಜಿ ಯೋಧರ ಮತ್ತು ವೀರ ವನಿತೆಯರ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿಯ ಎಸ್ಪಿಯಾದ ಶೋಭಾರಾಣಿ ಸೇರಿದಂತೆ ಅಡಿಷನಲ್ ಎಸ್ಪಿ ಮತ್ತು ಮಾಜಿ ಯೋಧರ ಹಾಗೂ ವೀರ ವನಿತೆಯರ ಸಮಿತಿಯ ಅಧ್ಯಕ್ಷರಾದ ಎವಿಕೆ ಚೌದರಿ ಉಪಾಧ್ಯಕ್ಷರಾದ ಚೆನ್ನರೆಡ್ಡಿ ಗೌರವ ಅಧ್ಯಕ್ಷರಾದ ಜೋಶಿ ಕಾರ್ಯದರ್ಶಿ ವಿಟಿ ನಾಯ್ಡು ನಾಗರಾಜ್ ಸೇರಿದಂತೆ ಮಾಜಿ ಯೋಧರು ಮತ್ತು ಅವರ ಕುಟುಂಬದ ಸದಸ್ಯರು ಇದ್ದರು.
ಕಾರ್ಯಕ್ರಮವನ್ನು ಮಾಜಿ ಯೋಧ ಬಿಹೆಚ್ಎಮ್ ವಿರೂಪಾಕ್ಷಯ್ಯ ನಡೆಸಿಕೊಟ್ಟರು.
ಇದಕ್ಕೂ ಮುನ್ನ ನಗರದ ಎಸ್ಪಿ ಸರ್ಕಲ್ ನಿಂದ ದುರ್ಗಮ್ಮ ದೇವಸ್ಥಾನದ ಹತ್ತಿರ ಇರುವ ಎಸ್ ಪಿ ಕಚೇರಿಯ ಮುಂದಿನ ಕಾರ್ಗಿಲ್ ವೀರಯೋಧರ ಸ್ಮಾರಕದವರಿಗೆ ಮೇಣದಬತ್ತಿ ಮೆರವಣಿಗೆಯನ್ನು ನಡೆಸಲಾಯಿತು.