WhatsApp Image 2024-08-16 at 12.00.58 PM

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮಗೆ ಸ್ವಾತಂತ್ರ್ಯ ಸಿಕ್ಕಿತು :  ಶಾಸಕ ರಾಯರೆಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 16- ಸ್ವಾತಂತ್ರ್ಯಗೋಸ್ಕರ ಹೋರಾಟ ಮಾಡಿದ ಎಲ್ಲಾ ಮಹಾತ್ಮರ ತ್ಯಾಗ ಬಲಿದಾನದಿಂದ ನಮ್ಮಗೆ ಸ್ವಾತಂತ್ರ್ಯ ಸಿಕ್ಕಿತ್ತು ಆ ಎಲ್ಲಾ ಮಹಾತ್ಮರನ್ನು ನಾವು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆ ಗಾರ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ, 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಸ್ತ ನಾಡಿನ ಮತ್ತು ಕ್ಷೇತ್ರದ ಜನತೆಗೆ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವದಕ್ಕೆ ಕಾರಣಿಕತ೯ರಾದ ಮಹಾತ್ಮ ಗಾಂಧಿ.ಜವಾಹರಲಾಲ್ ನೆಹರು.ಸುಭಾಸ್ ಚಂದ್ರ ಭೋಸ್ ರಾಜರಾಮ್ ಮೋಹನ್ ರಾಯ.ಕಿತ್ತೋರು ರಾಣಿ ಚೆನ್ನಮ್ಮ. ಲಾಲಬಹದ್ದೂರ ಶಾಸ್ತ್ರೀ ವಲಭಾಯಿ ಪಟೇಲ್.ಜಯಪ್ರಕಾಶ ನಾರಾಯಣ.ಬಾಲಗಂಗಾಧರ ತಿಲಕ್. ಡಾಕ್ಟರ್ ಬಿ. ಆರ್. ಅಂಬೇಡ್ಕರ್.ಜಾನಸಿಬಾಯಿ ಲಕ್ಷ್ಮೀರಾಣಿ. ರಾಜೇಂದ್ರ ಪ್ರಸಾದ್.ಡಾಕ್ಟರ ಎಸ್ ರಾಧಕೈಷ್ಣನ್ .ಶಿವಾಜಿ.ಇನ್ನೂ ಹಲವಾರು ಮಹಾತ್ಮರ ಬೆವರಿನ ತರ ರಕ್ತದ ಕೊಡಿಯನ್ನೇ ಹರಿಸಿದ್ದಾರೆ.

ಅವರಿಂದ ನಾವು ಇಂದು ಸ್ವತಂತ್ರರಾಗಿದ್ದೇವೆ ಆದರೆ ಇದು ನಮ್ಮ ಗೆ ದೊರಯಬೇಕಾದರೆ ನಮ್ಮವರು ಮಾಡಿದ ತ್ಯಾಗ ಬಲಿದಾನದಿಂದ ನಮ್ಮದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಅಂತಹವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೂಂಡು ಆ ಮಹನೀಯರಿಗೆ ನಾನು ನಮನ ಗಳನ್ನು ಸಲ್ಲಿಸುತ್ತೇನೆ ಬೇರೆಯವರಿಗೆ ಶಾಂತಿ ಪಾಠ ಹೇಳಿಕೊಟ್ಟ ರಾಷ್ಟ್ರ ನಮ್ಮದು. ಹಸಿವು ಅಂತಾ ಬಂದವರಿಗೆ ಅನ್ನ ನೀಡಿದ ನಾಡು ನಮ್ಮದು, ವಸತಿಯಿಲ್ಲದ ಅನೇಕ ಅನಿವಾಸಿಗಳಿಗೆ ಜಾಗ ಕೊಟ್ಟು ಜಾತಿ. ನೋಡದ ದೇಶ ನಮ್ಮ ದು ಬ್ರಿಟಿಷರು ಸುಮಾರು 200ವಷ೯ಗಳ ಕಾಲ ನಮ್ಮನ್ನಾಳಿದರು ಅವರ ಆಳ್ವಿಕೆಯ ಮುಷ್ಟಿಯಿಂದ ಹೊರಬರಲು ಮಾಡಿದ ಪ್ರಯತ್ನ ಸಾಕಷ್ಟು, ಬ್ರಿಟಿಷರು ಭಾರತದಲ್ಲಿ ಮಾಗ೯ವನ್ನು ಕಂಡುಹಿಡಿದ್ದಿದು ನಮ್ಮ ದೇಶದ ಸಿರಿ ಸಂಪತ್ತು ದೊಚ್ಚುವದಕ್ಕೆ ನಮ್ಮ ದೇಶ ಸಂಪತ್ತು ಬರಿತ ದೇಶ ಮತ್ತು ಅತ್ಯಂತ ಬುದ್ದಿವಂತ ಜನರಿದ್ದಾರೆ.

ಇಡೀ ವಿಶ್ವದಲ್ಲಿ ಅಂದಿನ ಕಾಲದಲ್ಲಿ ಶೇ 12/ ಪಸ೯ಂಟೇಜ ಶಿಕ್ಷಣ ಸಾಕ್ಷರತೆ ಇತ್ತು ಆದರೆ ಇತ್ತೀಚಿನ ಕಾಲದಲ್ಲಿ ಶೇ 80/ಪಸೆ೯ಟೆಂಜ ಶಿಕ್ಷಣ ಸಾಕ್ಷರತೆಯಲ್ಲಿ ಮುಂದುವರಿದಿದೆ. ನಮ್ಮ ದೇಶದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತುಇಲ್ಲಾ ಭ್ರಷ್ಟ ಆಡಳಿತ. ಬೇಜವಾಬ್ದಾರಿಯಾಗಿದೆ ದೇಶ ಬದಲಾವಣೆ ಯಾಗಬೇಕಾದರೆ ದೇಶದಲ್ಲಿ ಇರುವ ಎಲ್ಲಾ ವಿದ್ಯಾವಂತರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ದೇಶವನ್ನು ಮುನ್ನೇಡಿಸಬೇಕು. ದೇಶದಲ್ಲಿರುವ ಬಡವರಿಗೆ ಆಹಾರ ಧಾನ್ಯಗಳನ್ನು ಕೊಡುವತ್ತಿರುವ ಸರಕಾರಗಳು ಬಂದಿವೆ. ಎಲ್ಲಿಯವರೆಗೆ ಸಮಾಜ ಸುಧಾರಣೆಯಾಗುವದಿಲ್ಲಾ ಅಲ್ಲಿಯವರೆಗೆ ಸರಿಯಾಗಿ ಅಭಿವೃದ್ಧಿಯಾಗುವದಿಲ್ಲಾ ಜಾತಿ. ಜಾತಿ.ವ್ಯೆವಸ್ಥೆ.ಹಣ. ಹೆಂಡ ಧರ್ಮ. ಇದರಿಂದ ರಾಜಕೀಯ ಹಾಳಾಗಿದೆ.

ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗಳು ಆಗುತ್ತವೆ 12 ಹಸ್ಕೋಲ್. ಕೌಶಲ್ಯ ಅಭಿವೃದ್ಧಿಗೆ 120 ಕೋಟಿ ಕೂಡಿಸುತ್ತೇನೆ.ಕೌಶಲ್ಯ ಅಭಿವೃದ್ದಿಯಲ್ಲಿ ತರಬೇತಿ ಪಡೆದವರಿಗೆ ಎಲ್ಲಾರಿಗೂ ಉದ್ಯೋಗ ನಾನಾ ಕೈಗಾರಿಕಾ ಕ್ಷೇತ್ರದಲ್ಲಿ ಸಿಗುತ್ತದೆ ಕೂಪ್ಪಳ ಏತ ನೀರಾವರಿಯಿಂದ ಜಿಲ್ಲೆಯ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸುಮಾರು 76 ಕೆರಗಳನ್ನು ತುಂಬಿಸುವ ಯೋಜನೆಕ್ಕೆ ಅಂದಿನ ಸಿ.ಎಂ.ಸಿದ್ದರಾಮಯ್ಯನವರು ನೇತೃತ್ವದ ಸರಕಾರ ತಾತ್ಕಾಲಿಕ ಒಪ್ಪಿಕೂಳ್ಳಲಾಗಿತ್ತು ಆದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರರ ಕಳೆಪೆ ಕಾಮಗಾರಿಯಿಂದ ಪೈಪಲೈನ್ ಗಳು ಟಿಸಿ ಗಳು ಸುಟ್ಟು ಹೋಗಿವೆ ಅವುಗಳನ್ನು ಸರಿಪಡಿಸಿ ಶೀಘ್ರದಲ್ಲೇ ಕೆರೆ ಗಳನ್ನು ತುಂಬಿಸಿ ರೈತರ ಹಿತಕಾಪಾಡುವದಾಗಿ ಎಂದು ಹೇಳಿದರು.

ಈ ಕಾಯ೯ಕ್ರಮದಲ್ಲಿ ತಹಸೀಲ್ದಾರ್ ಬಸವರಾಜ ತನ್ನಳ್ಳಿ ಧ್ವಜಾರೋಹಣ ಮಾಡಿ ವಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಬಿ.ಎಂ.ಶಿರೂರ ಹನುಮಂತ ಗೌಡ ಚೆಂಡೊರು. ಕೆರಿಬಸಪ್ಪ ನಿಡಗುಂದಿ ಡಾಕ್ಟರ್ ನಂದಿತಾ ದಾನರಡ್ಡಿ. .ಅಮರೇಶ ಹುಬ್ಬಳ್ಳಿ.ರಿಯಾಜ ಖಾಜ್ಜಿ. ಹನುಮಂತ ಬಜಂತ್ರಿ.ರೇವಣಪ್ಪ ಪಾಟೀಲ. ಡಾಕ್ಟರ್ ಶಿವನಗೌಡ ದಾನರಡ್ಡಿ. ಶರಣಪ್ಪ ಗಾಂಜಿ.ಸುಧೀರ ಕೊಲ೯ಹಳ್ಳಿ. ತಾಲೂಕು ಮಟ್ಟದ ಅಧಿಕಾರಿಗಳಾದ ತಾ.ಪಂ.ಇಓ ಸಂತೋಷ ಬಿರಾದಾರ್, ಸಿಪಿಐ ಮೌನೇಶ್ವರ ಮಾಲಿ ಪಾಟೀಲ, ಗ್ರೇಡ್ 2 ತಹಶೀಲ್ದಾರ್ ಸತ್ಯಮ್ಮ, .ಪಿ.ಎಸ್.ಐ. ವಿಜಯ ಪ್ರತಾಪ್,  ಪ.ಪಂ.ಮುಖ್ಯಾಧಿಕಾರಿ ನಾಗೇಶ ಮತ್ತು ಇತರರು ಭಾಗವಹಿಸಿದ್ದರು.

ಈ ಕಾಯ೯ಕ್ರಮದಲ್ಲಿ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅತಿ ಸುಂದರವಾಗಿ ಮೂಡಿ ಬಂತು.

Leave a Reply

Your email address will not be published. Required fields are marked *

error: Content is protected !!