
ಸಿಎಂ ಸಿದ್ದರಾಮಯ್ಯಗೆ ಕಾರ್ಯಕರ್ತರಿಂದ ಸ್ವಾಗತ
ಆಲಮಟ್ಟಿಯ ಶ್ರೀ ಲಾಲಬಹದ್ದೂರಶಾಸ್ತ್ರೀ ಆಣೆಕಟ್ಟಿಗೆ ತೆರಳಿ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಬುಧವಾರದಂದು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೂ ಹಾರ ಹಾಕಿ ಸ್ವಾಗತಿಸಿದರು.
ಸಿಎಂ ಅವರ ಕಾರ್ಯಾಲಯದಿಂದ ಹೊರಡಿಸಿದ್ದ ಸಿಎಂ ಪ್ರವಾಸದ ಲಿಸ್ಟನಲ್ಲಿ ಬೆಳಗ್ಗೆ ೧೧ ಗಂಟೆಗೆ ಕುಷ್ಟಗಿ ಎನ್.ಹೆಚ್ ಬಳಿ ಆಗಮಿಸುವ ಸುದ್ದಿ ತಿಳಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಟ್ಟಣದ ನಂದಗೋಕುಲ ಹೊಟೆಲ್ ಬಳಿ ಜಮಾವಣೆಗೊಂಡಿದ್ದರು. ಅದರೆ ಸಿಎಂ ಸಿದ್ದರಾಮಯ್ಯನವರು ಮದ್ಯಾನ್ಹ ೧:೩೦ಕ್ಕೆ ಆಗಮಿಸಿದ ಅವರನ್ನು ಕಾರ್ಯಕರ್ತರು ಸನ್ಮಾನಿಸಿ ಬೀಳ್ಕೊಟ್ಟರು. ಇದೇವೇಳೆ ರೈತ ಸಂಘಟನೆಯ ಮುಖಂಡರು ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರತ್ತ ಕೈಬೀಸಿ ಹೆಚ್ಚೇನು ಮಾತನಾಡದೇ ಕೆಲವೇ ಕ್ಷಣಗಳಲ್ಲಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಬಯ್ಯಾಪುರ, ರಾಜ್ಯ ವಕ್ತಾರ ಲಾಡ್ಲೆಮಷಾಕ ದೋಟಿಹಾಳ, ವಿಜಯ ನಾಯಕ, ಹನಮೇಶ ಗುಮಗೇರಿ, ಸುರೇಶ ಕುಂಟನಗೌಡ್ರ, ಶಿವು ಕಟ್ಟಿಮನಿ, ಮಹಾಂತೇಶ ಬಂಡೇರ, ಇಮಾಮಸಾಬ ಗರಡಿಮನಿ ಸೇರಿದಂತೆ ಅನೇಕರು ಇದ್ದರು.