
ವಿಶ್ವ ಸೊಳ್ಳೆ ದಿನಾಚರಣೆ-ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಿ : ಹೆಚ್.ವಿಶ್ವನಾಥ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕರೂರಿನಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಬಾಲಾಜಿ ನೇತೃತ್ವದಲ್ಲಿ ಆಚರಿಸಿ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳ ಬಗ್ಗೆ ತಿಳಿಸಿಕೊಡಲಾಯಿತು.
ನಂತರದಲ್ಲಿ ಸಿರುಗುಪ್ಪ ತಾಲೂಕು ತಹಸಿಲ್ದಾರ್ ಹೆಚ್. ವಿಶ್ವನಾಥ್ ರವರು ಆಗಮಿಸಿ ಆರೋಗ್ಯ ಸಿಬ್ಬಂದಿಗಳನ್ನು ಉದ್ದೇಶಿಸಿ ಜನರಲ್ಲಿ ಸೊಳ್ಳೆಗಳು ಉತ್ಪತ್ತಿ ತಾಣಗಳನ್ನು ಮನೆ ಸುತ್ತಮುತ್ತಲಿನ ಪರಿಸರಗಳನ್ನು ಸ್ವಚ್ಛವಾಗಿ ಇಟ್ಟುಕೊಂಡು ಸೊಳ್ಳೆ ಹೆಚ್ಚದಂತೆ ಕಚ್ಚದಂತೆ ನೋಡಿಕೊಳ್ಳಲು ಮನೆ ಮನೆಗೆ ಮಾಹಿತಿ ನೀಡಿ ಎಂದು ತಿಳಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೊಳ್ಳೆ ಪರದೆ ಕಟ್ಟಿ ಸುಖ ನಿದ್ರೆ ಮಾಡಿರಿ ಕೀಟ ಚಿಕ್ಕದು ಕಾಟ ದೊಡ್ಡದು ಮುಂತಾದ ಘೋಷಣೆಯೊಂದಿಗೆ ಜಾತವು ಗ್ರಾಮ ಪಂಚಾಯಿತಿಯ ವೃತ್ತದ ವರೆಗೆ ಸಾಗಿ ಮಾನವ ಸರಪಳಿ ನಿರ್ಮಿಸಿ ಅಲ್ಲಿ ನೆರೆದಿದ್ದ ಎಲ್ಲಾ ಊರಿನ ಹಿರಿಯರನ್ನು ಸಂಘಟಿತಗೊಳಿಸಿ ಆರೋಗ್ಯ ಮಾಹಿತಿಯನ್ನು ನೀಡಿ ಜಾತ ಮರಳಿ ಬಂದಿತು ಈ ಸಂದರ್ಭದಲ್ಲಿ ವೆಂಕಣ್ಣ ಕಿರಿಯ ಆರೋಗ್ಯ ನಿಡಕ್ಷಣಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಕ ಅಧಿಕಾರಿಗಳು ಹಾಜರಿದ್ದರು.