
ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಮತ್ತು ವಿಶ್ವ ಹೃದಯ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 2- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮೂದಾಯ ಆರೋಗ್ಯ ಕೇಂದ್ರ ತಾವರಗೇರಾ, ಸಹಯೋಗದಲ್ಲಿ ವಿಶ್ವ ನಗರೀಕರ ದಿನಾಚರಣೆ ಮತ್ತು ವಿಶ್ವ ಹೃದಯ ದಿನಾಚೆರಣೆಯನ್ನು ಆಚರಿಸಲಾಯಿತು.
ಹೃದಯದ ಕಾಳಜಿ ವಹಿಸುವ ನಿಟ್ಟಿನಲ್ಲಿ ಜಾಗ್ರತಿ ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡಾ.ಕಾವೇರಿ ಶ್ಯಾವಿ ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ತಾವರಗೇರಾ ಇವರು ಉಧ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಪ್ರಸಾದ, ಡಾ.ಪೂರ್ಣಿಮಾ, ಹಿರಿಯ ಆರೋಗ್ಯ ಮೇಲ್ವಿಚಾರಕರಾದ ಶಂಕ್ರಮ್ಮ, ಆಪ್ತ ಸಮಾಲೋಚಕರಾದ ನಿರ್ಮಲ, ನೆತ್ರಾಧಿಕಾರಿಗಳಾದ ಗುರುದೇವಿ, ಎನ್‌ಸಿಡಿ ವಿಭಾಗದ ಸ್ಟಾಫನರ್ಸ ಮುತ್ತಮ್ಮ, ಲ್ಯಾಬ ಟೆಕ್ನಿಷಿಯನ್ ಜಯರಾಜ ಮತ್ತು ಆಕ್ಷತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.