
27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಹಂಪಿ, 25- ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ, ಹಾಗೂ ಮುಜರಾಯಿ ಇಲಾಖೆ, ವಿಜಯನಗರ ಜಿಲ್ಲೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಹಾಗೂ ಹೋಟೆಲ್ ಮಯೂರ ಭುವನೇಶ್ವರಿ (ಕೆ. ಎಸ್.ಟಿ.ಡಿ. ಸಿ) ಕಮಲಾಪುರ ಹೋಟೆಲ್ ಅಸೋಸಿಯೇಷನ್ ಹೊಸಪೇಟೆ, ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳು ಹಂಪಿ ಇವರ ಸಂಯೋಗದಲ್ಲಿ ಇದೇ ಸೆ. ೨೭.ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು “ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ (ರಥ ಬೀದಿ) ಹಂಪಿ ” ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪವಾಸೋದ್ಯಮ ನಿಮಿತ್ತ ಹಲವು ಕಾರ್ಯಕಾಮಗಳನ್ನು ೩ದಿನಗಳ ಕಾಲ ಹಮ್ಮಿಕೊಂಡಿದ್ದು ಇಂದು ೨೫.೦೯.೨೦೨೪ರಂದು ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಹಂಪಿ ಬಜಾರ್, ಎದುರು ಬಸವಣ್ಣ, ಮಾತಂಗ ಪರ್ವತ, ಕಮಲ್ ಮಹಲ್ ಪರಂಪಾರಿಕ ತಾಣಗಳಲ್ಲಿ ಸ್ವಚ್ಛತಾ ಹೀ ಸೇವಾ-೨೦೨೪ ಕಾರ್ಯಕ್ರಮ ಪ್ರಯುಕ್ತ ಹಂಪಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಾಗೂ ಪರಿಸರ ಸ್ನೇಹಿ ಹಂಪಿಯ ಬಗ್ಗೆ ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸಲಾಯಿತು.
ನಾಳೆಯ ಕಾರ್ಯಕ್ರಮ ವಿವರ : ದಿನಾಂಕ: ೨೬.೦೯. ೨೦೨೪ ರಂದು ಬೆಳಗ್ಗೆ ೬:೦೦ರಿಂದ ೯:೦೦ ರವರೆಗೆ ಎದುರು ಬಸವಣ್ಣ ದಿಂದ ಮಾತಂಗ ಪರ್ವತದ ವರೆಗೆ ಶಾಂತಿಗಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮ, ದಿನಾಂಕ: ೨೭.೦೯.೨೦೨೪ ರಂದು ಸಾಯಂಕಾಲ ೪:೦೦ ರಿಂದ ಕಲಾತಂಡಗಳ ಮೆರವಣಿಗೆ, ಪ್ರಾರ್ಥನೆ, ಸ್ವಾಗತ, ಉದ್ಘಾಟನೆ, ಮುಖ್ಯ ಅತಿಥಿಗಳ ಭಾಷಣ, ಅಧ್ಯಕ್ಷರ ಭಾಷಣ, ವಂದನಾರ್ಪಣೆ.
ಉದ್ಘಾಟನೆ : ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮಾನ್ಯ ವಸತಿ, ವ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಕರ್ನಾಟಕ ಸರ್ಕಾರ ಹಾಗೂ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಘನ ಉಪಸ್ಥಿತಿ ಹೆಚ್.ಕೆ. ಪಾಟೀಲ್ ಸಚಿವರು, ಕಾನೂನು ಹಾಗೂ ಸಂಸದೀಯ, ಮಾನವ ಹಕ್ಕುಗಳು, ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಅಧ್ಯಕ್ಷತೆ ಹೆಚ್.ಆರ್. ಗವಿಯಪ್ಪ ಶಾಸಕರು, ವಿಜಯನಗರ ಕ್ಷೇತ್ರ, ಗೌರವಾನಿತ್ವ ಮುಖ್ಯ ಅತಿಥಿಗಳು ಈ. ತುಕಾರಾಂ, ಸಂಸದರು (ಲೋಕಸಭೆ) ಬಳ್ಳಾರಿ, ಡಾ. ಪ್ರಭಾ ಮಲ್ಲಿಕಾರ್ಜುನ ಸಂಸದರು (ಲೋಕಸಭೆ) ದಾವಣಗೆರೆ, ಕೆ. ನೇಮಿರಾಜ ನಾಯ್ಕ ಶಾಸಕರು, (ವಿಧಾನಸಭೆ) ಹಗರಿಬೊಮ್ಮನಹಳ್ಳಿ ಕ್ಷೇತ್ರ ಡಾ. ಎನ್.ಟಿ. ಶ್ರೀನಿವಾಸ್ ಶಾಸಕರು, (ವಿಧಾನಸಭೆ) ಕೂಡ್ಲಿಗಿ ಕ್ಷೇತ್ರ, ಎಲ್. ಕೃಷ್ಣನಾಯಕ ಶಾಸಕರು, (ವಿಧಾನಸಭೆ) ಹಡಗಲಿ ಕ್ಷೇತ್ರ, ಎಂ.ಪಿ. ಲತಾ ಮಲ್ಲಿಕಾರ್ಜುನ ಶಾಸಕರು, (ವಿಧಾನಸಭೆ) ಹರಪನಹಳ್ಳಿ ಕ್ಷೇತ್ರ, ಬಿ. ದೇವೇಂದ್ರಪ್ಪ ಶಾಸಕರು, (ವಿಧಾನಸಭೆ) ಜಗಳೂರು ಕ್ಷೇತ್ರ, ಡಾ|| ಚಂದ್ರಶೇಖರ ಬಿ. ಪಾಟೀಲ್ ಶಾಸಕರು, (ವಿಧಾನ ಪರಿಷತ್), ಶಶೀಲ್ ಜಿ. ನಮೋಶಿ ಶಾಸಕರು, (ವಿಧಾನ ಪರಿಷತ್) ಶ್ರೀ ವೈ.ಎಂ. ಸತೀಶ್ ಶಾಸಕರು, (ವಿಧಾನ ಪರಿಷತ್), ರೂಪೇಶ್ ಕುಮಾರ ಎನ್. ಅಧ್ಯಕ್ಷರು, ನಗರಸಭೆ, ಹೊಸಪೇಟೆ, ಹೆಚ್.ಎನ್.ಎಫ್ ಇಮಾಮ್ ನಿಯಾಜಿ ಅಧ್ಯಕ್ಷರು, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ, ರಜನಿ ಷಣ್ಮುಖಗೌಡ ಅಧ್ಯಕ್ಷರು, ಗ್ರಾಮ ಪಂಚಾಯತಿ, ಹಂಪಿ, ವಿಶೇಷ ಆಹ್ವಾನಿತರಾಗಿ ನವೀನ್ ರಾಜ್ ಸಿಂಗ್ ಭಾ.ಆ.ನೇ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ವಿಜಯನಗರ ಜಿಲ್ಲೆ, ಸಲ್ಮಾ ಕೆ. ಫಾಹಿಮ್ ಭಾ.ಆ.ಸೇ. ಸರ್ಕಾರದ ಕಾರ್ಯದರ್ಶಿಗಳು ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಡಾ. ರಾಜೇಂದ್ರ ಕೆ.ವಿ. ಭಾ.ಆ.ಸೇ. ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು, ಎಂ.ಎಸ್. ದಿವಾಕರ ಭಾ.ಆ.ಸೇ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ವಿಜಯನಗರ ಜಿಲ್ಲೆ, ನೋಂಗ್ಟಾಯ್ ಮೊಹಮದ್ ಅಲಿ ಅಕ್ರಮ್ ಶಾ ಭಾ.ಆ.ಸೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ವಿಜಯನಗರ ಜಿಲ್ಲೆ, ಶ್ರೀಹರಿಬಾಬು ಭಾ.ಪೊ.ಸೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿಜಯನಗರ ಜಿಲ್ಲೆ, ನಿಹಿಲ್ ದಾಸ್ ಪುರಾತತ್ವ ಅಧೀಕ್ಷಕರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ವೃತ್ತ. ಇವರುಗಳು ಉಪಸ್ಥಿತರಿರುವರು ಎಂದು ತಿಳಿದು ಬಂದಿದೆ.