
ಉತ್ತರಾದಿ ಶ್ರೀಗಳಿಂದ ಪದ್ಮನಾಭ ತಿರ್ಥರ ಆರಾಧನೆ ಸಂಪನ್ನ
ಕರುನಾಡ ಬೆಳಗು ಸುದ್ದಿ
ಗಂಗಾವತಿ,ಡಿಂ೧— ತಾಲೂಕಿನ ಆನೆಗೋಂದಿ ಯ ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತಿರ್ಥರ ನೇತೃತ್ವದಲ್ಲಿ ಪದ್ಮನಾಭತಿರ್ಥರ ಉತ್ತರಾಧನೆ ಸಂಪನ್ನ ವಾಯಿತು.
ಪದ್ಮನಾಭತಿರ್ಥರಿಗೆ ಪಂಚಾಮೃತ ಅಭಿಷೇಕ,ವಿಶೇಷ ಅಲಂಕಾರ ಸೇವೆ ಹಾಗೂ ಮೂಲರಾಮದೇವರ ಸಂಸ್ಥಾನ ಪೂಜೆ, ಪಂಡಿತರು ಗಳಿಂದ ಉಪನ್ಯಾಸ ಜರುಗಿತು.
ಈಸಂದರ್ಭದಲ್ಲಿ ಶ್ರೀ ಕರ ಆಚಾರ್ಯ ಉರ್ಮಜಿ,ಆನಂದ ಆಚಾರ್ಯ ಮಹಿಷಿ, ಉತ್ತರಾದಿ ಮಠದ ದಿವಾನ ಶಶಿ ಆಚಾರ್ಯ,ಆನಂದಾಚಾರ್ಯ ಅಕ್ಕಲಕೋಟೆ,ಹುನಗುಂದ ಜಗನ್ನಾಥ ಕೋಪ್ಪಳ,ಅನಿಲ ಅಯೋಧ್ಯಾ, ಮನೋಜ ಹುಯಿಲಗೋಳ, ಗುರುರಾಜ ಬೆಳ್ಳುಬ್ಬಿ, ಜಯತಿರ್ಥ ತಿಕೋಟಿಕರ,ಅಡವಿರಾವ ಕಲಾಲಬಂಡಿ,ಅರುಣ ಅಯೋಧ್ಯಾ, ಪಂಡಿತ ಬೆವಿನಾಳ ಪ್ರಲ್ಹಾದ ಆಚಾರ್ಯ,ವೆಂಕಟಗಿರಿ ಆನ್ವರಿ,ದಾಸನಾಳ ಶ್ರೀ ನಿವಾಸ,ವೆಂಕಟೇಶ ಕೆಸಕ್ಕಿ ಮುಂತಾದವರು ಉಪಸ್ಥಿತರಿದ್ದರು