ಮಂತ್ರಾಲಯ ಶ್ರೀ ನೇತೃತ್ವದಲ್ಲಿ ಪದ್ಮನಾಭತಿರ್ಥರ ಆರಾಧನೆ ಸಂಪನ್ನ

ಕರುನಾಡ ಬೆಳಗು ಸುದ್ದಿ

ಗ0ಗಾವತಿ, 29- ತಾಲೂಕಿನ ಆನೆಗೊಂದಿಯ ನವವೃಂದಾವನಗಡೆಯಲ್ಲಿ ಪದ್ಮನಾಭತಿರ್ಥರ ಪೂರ್ವ ಆರಾಧನೆಯನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಮಠಾಧೀಶರಾದ ಶ್ರೀ ಸುಬುದೇಂದ್ರ ತಿರ್ಥರು ನೇರವೇರಿಸಿದರು. ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತಿರ್ಥರು ಸಾಥ ನೀಡಿದರು.

ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಮಠಾಧೀಶರಾದ ಶ್ರೀ ಸುಬುದೇಂದ್ರ ತಿರ್ಥರು ಮಾತನಾಡಿ, ಬ್ರಹ್ಮ ದೇವರ ಕರಾರ್ಚಿತ ಉಭಯ ಮಠಗಳ ರಾಮದೇವರು,ಆಚಾರ್ಯರಿಂದ ಕೊಡಮಾಡಲ್ಪಟ್ಟ,ರಾಜರಿಂದ ಪೂಜತವದ ದೆವರುಗಳ ಹಾಗೂ ಪದ್ಮನಾಭತಿರ್ಥರು, ಜಯತಿರ್ಥರು ಮೋದಲಾಗಿ ಉಭಯ ಮಠದವರು ಸರ್ವರಿಗೂ ಏಳಿಗೆಗಾಗಿ ಪ್ರಾರ್ಥಿಸಿದ್ದವೆ ಎಂದರು.

ಪದ್ಮನಾಭತಿರ್ಥರ ವೃಂದಾವನಕ್ಕೆ ಉಭಯ ಯತಿಗಳು ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಹಾಮಂಗಳಾರತಿ ನೇರವೇರಿಸಿದರು.

ಈ ಸಂದರ್ಭದಲ್ಲಿ ಬಿ.ಎನ್.ವಿಜಯಿಂದ್ರ ಆಚಾರ, ಡಾ.ಎನ್.ವಾದಿ ಆಚಾರ, ದ್ವಾರಪಾಲಕ ಅನಂತಚಾರ ಪುರಾಣಿಕ, ಮಧ್ವೇಶ ತಂತ್ರಿ, ವಿಷ್ಣು ಕಶ್ಯಪಚಾರ, ನರಹರಿ ಆಚಾರ, ದ್ವಾರಕನಾಥ ಆಚಾರ, ಬಂಡಿ ಶ್ಯಾಮಚಾರ್ಯ, ವೆಂಕಟ ನರಸಿಂಹ ಆಚಾರ ರಾಜಪುರೋಹಿತ, ವಿಜಯ ಡಣಾಪೂರ,ನಗರಸಭೆ ಸದಸ್ಯ ವಾಸುದೇವ ನವಲಿ, ನಟ ವಿಷ್ಣುತಿರ್ಥ, ಇಂದಿರೇಶ ಆಚಾರ, ಶ್ರೀಹರಿ ಆರ್.ಸಿ ಮಂತ್ರಾಲಯ ಶ್ರೀಪತಿ, ಗುಂಜಳ್ಳಿ ವಿಜಯಿಂದ್ರ, ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ ಇಡಪನೂರ, ವೆಂಕಟರಾವ ಹೆರೂರ, ಮೋಹಿತ ಅಯೋಧ್ಯಾ, ಸುದಿಂದ್ರ ನವಲಿ, ಲಕ್ಮಿö್ಮಕಾಂತ ಹೇರೂರ, ಗುಂಜಳ್ಳಿ ಗೋಪಿನಾಥ, ಶ್ರೀಪಾದ ಆಚಾರ್ಯ ಕುರ್ಡಿ, ವಿದ್ಯಾಪಿಠದ ಪ್ರಾಚಾರ್ಯ ರಮಣರಾವ, ಶ್ರೀಮಠದ ವಿಚಾರಣಕರ್ತ ಡಾ.ಕೆ.ಎನ್ ಮಧೂಸೂಧನ ಆಚಾರ್ಯ, ರಾಘವೇಂದ್ರರಾವ ಬೇವಿನಾಳ ಮುಂತಾದವರು ಉಪಸ್ಥಿತರಿದ್ದರು.

ಅಪಾರ ಭಕ್ತ ಸಮೂಹ ಭಜನಾ ಮಂಡಳಯ ಸದಸ್ಯರುಗಳು ಭಾಗವಹಿಸಿದ್ದರು.

ಶೋಭಾ ಯಾತ್ರೆ : ಆನೆಗೊಂದಿಯ ರಾಘವೇಂದ್ರಸ್ವಾಮಿ ಮಠದದಿಂದ ತುಂಗಭದ್ರಾ ನದಿಯ ತೀರದ ವರೆಗೆ ಉಭಯ ಶ್ರೀಪಾದಂಗಳವರ ಭಜನಾ ಮಂಡಳಿ ಅಪಾರ ಭಕ್ತ ಸಮೂಹದೋಂದಿಗೆ ಶೋಭಯಾತ್ರೆ ಜರುಗಿತು.

Leave a Reply

Your email address will not be published. Required fields are marked *

error: Content is protected !!