3

ಯಲಬುರ್ಗಾ : ವಿಜಯ ದುರ್ಗಾದೇವಿ ಪುರಾಣಕ್ಕೆ ಚಾಲನೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 6- ಪಟ್ಟಣದ ಆರಾಧ್ಯ ದೇವತೆ ಶ್ರೀ ವಿಜಯ ದುರ್ಗಾದೇವಿಯ ದೇವಸ್ಥಾನದಲ್ಲಿ ಶರನ್ನವ ಉತ್ಸವ ನಿಮಿತ್ತ ದೇವಿಯ ಪುರಾಣಕ್ಕೆ ಚಾಲನೆ ನೀಡಲಾಯಿತು.

ಪುರಾಣ ಪ್ರವಚಕಾರ ಸಂಕನೂರಿನ ಚಂದ್ರಶೇಖರಯ್ಯ ಶಾಸ್ತಿç ಹಿರೇಮಠ ಮಾತನಾಡಿ, ನವರಾತ್ರಿ ಉತ್ಸವ ಆಚರಣೆಯಲ್ಲಿ ದಸರಾ ವೇಳೆ ೯ ದಿನಗಳ ಕಾಲ ದೇವಿಯ ಪುರಾಣ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಪುರಾಣವನ್ನು ಆಲಿಸಬೇಕು ಅನಾದಿ ಕಾಲದಿಂದಲೂ ಬಂದಿರುವ ಪುರಾಣ ಕಾರ್ಯಕ್ರಮವನ್ನು ಎಲ್ಲರೂ ಚಾಚು ತಪ್ಪದೇ ಕೇಳಿ ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ತಬಲಾ ವಾದಕ ಶರಣಕುಮಾರ ಬಂಡಿ, ವಿಜಯ ದುರ್ಗಾದೇವಿ ದೇವಸ್ಥಾನದ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!