ಶ್ರಮದಾನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ : ಯಮನೂರಪ್ಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 31- ತಾಲೂಕು ಹಳೆಕೋಟೆ ಗ್ರಾಮದ ಮರಿಸ್ವಾಮಿ ಮಠದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಕೆಲಸದೊಂದಿಗೆ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ಶ್ರಮದಾನ ಸೇರಿ ಎಲ್ಲಾವನ್ನು ಒಳಗೊಂಡಿದೆ ಎಂದು ಎನ್ಎಸ್ಎಸ್ ಶಿಬಿರಾಧಿಕಾರಿ ಗ್ರಂಥಪಾಲಕ ಯಮನೂರಪ್ಪ ಹೇಳಿದರು.
ಸಿರುಗುಪ್ಪ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ ನಿಮಿತ್ತ ಹಳೆಕೋಟೆ ಗ್ರಾಮದ ಮರಿಸ್ವಾಮಿ ಮಠದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಚಾರ್ಯ ಜಿ ಕೊಟ್ರಪ್ಪ ಎನ್ಎಸ್ಎಸ್ ಘಟಕದ ಅಧಿಕಾರಿ ಕೃಷ್ಣಪ್ಪ ಸಹಾಯಕ ಪ್ರಾಧ್ಯಾಪಕ ಡಾ ಕೆ ಎಂ ಚಂದ್ರಕಾಂತ ಅತಿಥಿ ಉಪನ್ಯಾಸಕರಾದ ಮಹಾದೇವ ಡಾ ಚಂದ್ರಮ್ಮ ದೈಹಿಕ ಶಿಕ್ಷಣ ಶಿಕ್ಷಕ ವೈ ಡಿ ಮಲ್ಲಿಕಾರ್ಜುನ ಸಾಕ್ಷರತಾ ಅಬ್ದುಲ್ ನಬಿ ಇತರರು ಇದ್ದರು.