
ಸಿರುಗುಪ್ಪ ನಗರಸಭಾ ಅಧ್ಯಕ್ಷರಾಗಿ ಬಿ.ರೇಣುಕಮ್ಮ, ಉಪಾಧ್ಯಕ್ಷರಾಗಿ ಯಶೋದ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ನಗರ ಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು.
ಸಿರುಗುಪ್ಪ ನಗರಸಭೆ 31 ಸದಸ್ಯರನ್ನು ಹೊಂದಿರುವ ನಗರಸಭೆಯಲ್ಲಿ 19 ಕಾಂಗ್ರೆಸ್ 1 ಸ್ವತಂತ್ರ 11 ಬಿಜೆಪಿ ಸದಸ್ಯರು ಈಗಿನ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ 26ನೇ ವಾರ್ಡಿನ ಬಿ ರೇಣುಕಮ್ಮ ಸಣ್ಣ ವೆಂಕಟೇಶ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರ ಸ್ಥಾನ ಹಿಂದುಳಿದ ವರ್ಗ -ಅ ಮಹಿಳೆ 23ನೇ ವಾರ್ಡಿನ ಯಶೋದ ಚಿದಾನಂದ ಮೂರ್ತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಬಿ.ಎಂ.ನಾಗರಾಜ ಚುನಾವಣೆಯಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷದಿಂದ ನೂತನ ಅಧ್ಯಕ್ಷರು ರೇಣುಕಮ್ಮ ಹಾಗೂ ಉಪಾಧ್ಯಕ್ಷೆ ಯಶೋಧಮೂರ್ತಿ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಅಭಿನಂದಿಸಿ ಉತ್ತಮ ಆಡಳಿತ ನಡೆಸಬೇಕು ಚುನಾವಣೆವರೆಗೆ ಮಾತ್ರ ಪಕ್ಷ ನಂತರ ಎಲ್ಲರೂ ಸಹೋದರ ಸಹೋದರಿಯರ ಭಾವನೆಯಿಂದ ಆಡಳಿತ ನಡೆಸುವ ಮೂಲಕ ಸಿರುಗುಪ್ಪ ನಗರದ ಅಭಿವೃದ್ಧಿ ಮಾಡಬೇಕು ಮತ್ತು ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಇಲ್ಲಿ ಯಾವುದೇ ಪಕ್ಷ ವರ್ಗ ಭೇದವಿಲ್ಲದೆ ಸಾಮೂಹಿಕವಾಗಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಆಡಳಿತ ನಡೆಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ಕಾರ್ಯವನ್ನು ಮಾಡಬೇಕು ಅಲ್ಲದೆ ಎಲ್ಲರ ವಿಶ್ವಾಸ ಪಡೆದು ಕಾರ್ಯ ನಿರ್ವಹಿಸಬೇಕು ಎಂದರು.
ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ, ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಗೋಪಾಲ ರೆಡ್ಡಿ, ನಗರ ಸಭೆ ಮಾಜಿ ಅಧ್ಯಕ್ಷ ಬಿ ಮುತ್ಯಾಲಯ್ಯ ಶೆಟ್ಟಿ, ಬಿ ಎಂ ಸತೀಶ್, ಜಮೀನ್ ಜಮಿನ್ದಾರ್ ಸೈಯದ್ ಮೋಹಿದೀನ್ ಖಾದ್ರಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ರಾವಿಹಾಳ್ ಹುಸೇನ್ ಪೀರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನ ಗೌಡ, ನರೇಂದ್ರ ಸಿಂಹ ನಾಯಕ, ದೇವರ ಮನೆ ನಾಗಪ್ಪ, ವಕೀಲರಾದ ವೆಂಕಟೇಶ ನಾಯಕ್, ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ನಗರ ಸಭೆಯ ಎಲ್ಲಾ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.