ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಶೂನ್ಯ ಭ್ರಷ್ಟಾಚಾರ ಹೆಚ್ಚಳ : ಆಚಾರ್
ಕರುನಾಡ ಬೆಳಗು ಸುದ್ದಿ
ಕುಕನೂರು, 31- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊAಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ ವಾಲ್ಮೀಕಿ ಅಗರಣದಂತಹ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಪಕ್ಷದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯಲಬುರ್ಗಾ ಮಂಡಲ ವತಿಯಿಂದ ಸದಸ್ಯತ್ವ ಅಭಿಯಾನ-೨೦೨೪ ಮಂಡಲ ಕಾರ್ಯಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ದೇಶಿ ಮಾತನಾಡಿ, ದೀನ ದಯಾಳ ಶರ್ಮಾ ಶ್ಯಾಮ್ ಪ್ರಸಾದ್ ಅವರ ದೂರ ದೃಷ್ಟಿಯಡಿ ಒಂದು ಹಿಂದುಗಳ ಪಕ್ಷ ಕಟ್ಟಬೇಕು ಎಂದು ಅವರ ಶ್ರಮದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳಿಂದಾಗಿ ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಈ ಕ್ಷೇತ್ರದ ಶಾಸಕರಾದವರು ಇದುವರೆಗೂ ಒಂದು ಕೆರೆಯನ್ನು ಕೂಡ ತುಂಬಿಸಿಲ್ಲ ಯಾಕೆಂದ್ರೆ ರೈತರ ಸಮುದಾಯದ ಬಗ್ಗೆ ಅವರಿಗೆ ಕಿಚಿತ್ತು ಕಾಳಜಿ ಇಲ್ಲ. ಕಾಂಗ್ರೆಸ್ ನವರಿಗೆ ಸುಳ್ಳು ಹೇಳುವುದು ಒಂದು ದಂಧೆ ಹಾಗಿದೆ. ಮುಡ ಹಗರನ ಇರಬಹುದು ಹಾಗೂ ವಾಲ್ಮೀಕಿಯ ಹಗರನ ಇರಬಹುದು ಇಂತಹ ಭ್ರಷ್ಟಾಚಾರಗಳು ಇನ್ನು ಜಾಸ್ತಿ ಇವೆ. ಸಿಎಂ ಮತ್ತು ಡಿಸಿಎಂ ಕೋರ್ಟಿಗೆ ಹೋಗ್ತಾರೆಂದರೆ ಇವರದು ಎಷ್ಟು ಸೀಕ್ರೆಟ್ ಇರಬೇಕು, ಕೃಷ್ಣಾ ನದಿಯ ನೀರು ಎಷ್ಟೋ ಟಿಎಂಸಿ ಆಂಧ್ರ ಅಥವಾ ಸಮುದ್ರ ಸೇರುತ್ತಿದೆ ಅದರ ಬಗ್ಗೆ ಈ ಕ್ಷೇತ್ರದ ಶಾಸಕರಿಗೆ ಕಿಚಿತ್ತು ಆದರೂ ಕಾಳಜಿ ಇದೆಯಾ ನಮ್ಮ ಅವಧಿಯಲ್ಲಿ ಕಾಂಗ್ರೆಸ್‌ನವರು ಕಳಪೆ ಕಾಮಗಾರಿ ಆಗಿದೆ ಎಂದು ಸುಳ್ಳು ಪತ್ರ ಬರೆದು ಪ್ಲೆಕ್ಸ್ ಹಾಕಿಕೊಳ್ಳುತ್ತಾರೆ ಕಾಮಗಾರಿಯ ಜವಾಬ್ದಾರಿ ಕಾಂಟ್ರಾಕ್ಟರದ್ದು, ಇರುತ್ತದೆ ಅದನ್ನು ಕಾಮಗಾರಿ ಕೆಲಸ ಮಾಡುವ ಮುನ್ನ ಮುಂದೆ ನಿಂತು ಸರಿಯಾಗಿ ಮಾಡಿಸಿಕೊಳ್ಳಬೇಕು ಅದು ಬಿಟ್ಟು ಇದಕ್ಕೆಲ್ಲ ಸರಕಾರ ಕಾರಣ ಎಂದು ಸುಳ್ಳು ದಿಂಬಿಸಿರುವುದಲ್ಲ, ಕಾಂಗ್ರೆಸ್‌ನವರು ಒಂದು ಸುಳ್ಳನ್ನು ನೂರು ಸಾರಿ ಹೇಳಿ ಅದನ್ನೇ ಒಂದು ಸತ್ಯವಾಗಿ ಮಾಡುತ್ತಾರೆ. ಆದರೆ ಬಿಜೆಪಿ ಪಕ್ಷ ಸತ್ಯವನ್ನು ಸತ್ಯವಾಗಿಯೇ ಹೇಳುತ್ತದೆ ಅದಕ್ಕೆ ಕಾಂಗ್ರೆಸ್ಸಿಗೂ ಮತ್ತು ಬಿಜೆಪಿ ಪಕ್ಷಕ್ಕೆ ಇರುವ ವ್ಯತ್ಯಾಸ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಸದಸ್ಯತ್ವ ಅಭಿಯಾನಕ್ಕೆ ಸೆ.೧ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಸೆ.೨ ರಿಂದ ೧೫ ದಿನಗಳ ಕಾಲ ಸದಸ್ಯತ್ವ ಅಭಿಯಾನ ಜರುಗಲಿದೆ, ಪಕ್ಷ ಗಟ್ಟಿಯಾಗಬೇಕಾದರೆ ಸಂಘಟನೆ ಅವಶ್ಯಕವಾಗಿದೆ. ಪ್ರತಿಯೊಬ್ಬರು ಸಕ್ರಿಯ ಸದಸ್ಯತ್ವವನ್ನು ಹೊಂದಬೇಕು. ವೈಯಕ್ತಿಕ ಕೆಲಸದ ಮಧ್ಯೆಯೂ ಬಿಡು ಮಾಡಿಕೊಂಡು ಪಕ್ಷ ಸಂಘಟನೆಗೆ ಕೆಲಸ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರಾಜಕತೆಯನ್ನು ಸೃಷ್ಟಿ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಮಾರುತಿ ಹೊಸಮನಿ, ಸದಸ್ಯತ್ವ ಅಭಿಯಾನದ ಸಂಚಾಲಕ ಈಶಪ್ಪ ಹಿರೇಮನಿ, ಸ. ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರ್, ಅಮರೇಶ್ ಹುಬ್ಬಳ್ಳಿ, ಯಲಬುರ್ಗಾ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರೀಮತಿ ಸಂತೋಷಿಮಾ ಜೋಶಿ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಸಿ.ಎಚ್.ಪಾಟೀಲ್, ಬಸಲಿಂಗಪ್ಪ ಭೂತೆ, ಶಂಕ್ರಪ್ಪ ಸುರಪುರ, ಶಿವಪ್ಪ ವಾದಿ, ಸೋಮನಗೌಡ ಪಾಟೀಲ್, ಶರಣಪ್ಪ ಬಣ್ಣದ ಬಾವಿ, ಶರಣಪ್ಪ ಈಳೆಗೇರ, ಇತರರಿದ್ದರು.