
ಅಂಗನವಾಡಿ ಕಟ್ಟಡದ ಕಾಮಗಾರಿಗೆ ಶಾಸಕರಿಂದ ಅಡಿಗಲ್ಲು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ತಾಲೂಕಿನ ಶಾಲಿಗನೂರು ಗ್ರಾಮದಲ್ಲಿ ಕೆ ಕೆ ಆರ್ ಡಿ ಬಿ ಯೋಜನೆಯ ಅನುದಾನದ ಅಡಿಯಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಯ ಅಡಿಗಲ್ಲನ್ನು ಶಾಸಕ ಬಿ ಎಂ ನಾಗರಾಜ ನೆರವೇರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಜಿ ಪ್ರದೀಪ್ ಕುಮಾರ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಬಿಂದಿಗೆ ವೀರನಗೌಡ, ಬಸನಗೌಡ, ಸೋಮಯ್ಯ, ಕಾಡಸಿದ್ದಪ್ಪ, ಚಿದಾನಂದಪ್ಪ ಕೆ.ಸುಗೂರು, ಕೆ.ಲಿಂಗಪ್ಪ, ನಗರಸಭಾ ಸದಸ್ಯರಾದ ಹೆಚ್ ಗಣೇಶ್, ರೇಣುಕಾ, ರಾಜ್ ಬಿ, ಉಮೇಶ್ ಗೌಡ, ಪವನ್ ದೇಸಾಯಿ, ಅಕ್ಷರ ದಾಸೋಹ ಸಾಕ್ಷರತಾ ಅಬ್ದುಲ್ ನಬಿ, ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆದಾರರು, ಶಾಲಿಗನೂರು ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.